Gl harusha
ನಿಧನ

ಕಲ್ಲರ್ಪೆ ಚಿನ್ನು ಹೋಟೆಲ್ ಮಾಲಕ ಮೋಹನ್ ಆತ್ಮಹತ್ಯೆ!

ಕುರಿಯ ಗ್ರಾಮದ ಮಲಾರ್ ನಿವಾಸಿ, ಕಲ್ಲರ್ಪೆ ಚಿನ್ನು‌ ಹೋಟೆಲ್ ಮಾಲಕ ಮೋಹನ್ (38 ವ.) ಅವರು ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕುರಿಯ ಗ್ರಾಮದ ಮಲಾರ್ ನಿವಾಸಿ, ಕಲ್ಲರ್ಪೆ ಚಿನ್ನು‌ ಹೋಟೆಲ್ ಮಾಲಕ ಮೋಹನ್ (38 ವ.) ಅವರು ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

srk ladders
Pashupathi
Muliya

ಮಲಾರಿನ ತನ್ನ ಮನೆಯ ಒಳಗಡೆಯೇ ನೇಣು‌ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಡೆತ್ ನೋಟ್’ನಲ್ಲಿ, ಸಾಲಬಾಧೆಯೇ ತನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದಾರೆ.

ನೆರೆಯ ಮನೆಯಲ್ಲಿ ಕಾರ್ಯಕ್ರಮಕ್ಕೆಂದು ಮನೆಯವರು ಹೋಗಿದ್ದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸಂಜೆ 4 ಗಂಟೆ ಸುಮಾರಿಗೆ ಮನೆಯವರು ಮನೆಗೆ ಆಗಮಿಸಿದಾಗ ಘಟನೆ ಬೆಳಕಿಗೆ ಬಂದಿದೆ.

ಮೃತರು ತಾಯಿ ಪುಷ್ಪ, ಪತ್ನಿ ಪ್ರೇಮಾ ಹಾಗೂ 4 ವರ್ಷದ ಮಗು ಹಂಸಿಕಾ ಅವರನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts