ವ್ಯಕ್ತಿಯೋರ್ವರ ಮೃತದೇಹ ಅಂಡಿಂಜೆಯಲ್ಲಿ ಮಾ. 26ರಂದು ಸಂಜೆ ಪತ್ತೆಯಾಗಿದೆ.
ಮೃತ ವ್ಯಕ್ತಿಯನ್ನು ನಾರಾವಿ ತುಂಬೆ ಗುಡ್ಡೆ ನಿವಾಸಿ ಕಿಟ್ಟ ಯಾನೆ ಸುಧಾಕರ (45) ಎಂದು ತಿಳಿದುಬಂದಿದೆ.
ಕಳೆದ ಹಲವಾರು ವರ್ಷಗಳಿಂದ ನಾರಾವಿಯಲ್ಲಿ ಲೈನ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾಕರ ಅವರು, ಮಾ. 26ರಂದು ಸಂಜೆ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಮಾ. 26ರಂದು ಸಂಜೆ ವೇಳೆ ಇವರ ಮೃತದೇಹ ಅಂಡಿಂಜೆ ಟಿಸಿ ಹತ್ತಿರ ಪತ್ತೆಯಾಗಿದ್ದು, ಕೈಯಲ್ಲಿ ಒಂದು ಗಾಯದ ಗುರುತು ಪತ್ತೆಯಾಗಿದೆ. ಇವರ ಸಾವಿಗೆ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.