Gl jewellers
ಕಾರು ಅಪಘಾತ: ನಿವೃತ್ತ ವಲಯಾರಣ್ಯಾಧಿಕಾರಿ ಕೆ.ವಿ.ಜೋಸೆಫ್‌ ನಿಧನ!
ನಿಧನ

ಕಾರು ಅಪಘಾತ: ನಿವೃತ್ತ ವಲಯಾರಣ್ಯಾಧಿಕಾರಿ ಕೆ.ವಿ.ಜೋಸೆಫ್‌ ನಿಧನ!

ಮನೆಯಲ್ಲಿ ನಿಲ್ಲಿಸಿದ್ದ ಕಾರು ಹಿಂದಕ್ಕೆ ಚಲಿಸಿದ ಪರಿಣಾಮ ಅಂಗಳದಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಸುಳ್ಯ: ಮನೆಯಲ್ಲಿ ನಿಲ್ಲಿಸಿದ್ದ ಕಾರು ಹಿಂದಕ್ಕೆ ಚಲಿಸಿದ ಪರಿಣಾಮ ಅಂಗಳದಲ್ಲಿ ನಿಂತಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ.

Pashupathi
Papemajalu garady
Karnapady garady

ಮೃತಪಟ್ಟ ವ್ಯಕ್ತಿಯನ್ನು ನಿವೃತ್ತ ರೇಂಜರ್ ಜೋಸೆಫ್ (74) ಎಂದು ಗುರುತಿಸಲಾಗಿದೆ.

ಸುಳ್ಯ ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ನಿವೃತ್ತ ಜೋಸೇಫ್ ಅವರಿಗೆ ಗುದ್ದಿದಾಗ ಕುಸಿದು ಬಿದ್ದರೆನ್ನಲಾಗಿದೆ. ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ.

ಅರಣ್ಯ ಇಲಾಖೆಯಲ್ಲಿ ಪಂಜ, ಮಂಗಳೂರು ಹಾಗೂ ಸಂಪಾಜೆ ಕಡೆಗಳಲ್ಲಿ ಸೇವೆ ಸಲ್ಲಿಸಿ ಸಂಪಾಜೆಯಲ್ಲಿ ರೇಂಜರ್ ಆಗಿ ನಿವೃತ್ತರಾಗಿದ್ದರು. ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts