Gl
ಅಪಘಾತ

ವಿಟ್ಲದಲ್ಲಿ ಬೆಂಕಿ ಅವಘಡ; ಹಲವು ಅಂಗಡಿಗಳಿಗೆ ಹಾನಿ! ಅಗ್ನಿ ಶಾಮಕದಳದಿಂದ ತ್ವರಿತ ಕಾರ್ಯಾಚರಣೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಮಂಗಳೂರು ರಸ್ತೆಯಲ್ಲಿರುವ ಶ್ರೀ ಎಲೆಕ್ಟೋನಿಕ್ಸ್ ಅಂಗಡಿಯಲ್ಲಿ ಭಾರೀ ಬೆಂಕಿ ಅವಘಡ ಸಂಭವಿಸಿದೆ.

core technologies

ಶಾರ್ಟ್ ಸರ್ಕ್ಯೂಟ್‌ನಿಂದಲೇ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಬೆಂಕಿಯ ತೀವ್ರತೆ ಹೆಚ್ಚಿದ ಹಿನ್ನೆಲೆಯಲ್ಲಿ ಬಿಸಿರೋಡ್‌ನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.

ಘಟನೆಯ ಹಿನ್ನೆಲೆಯಲ್ಲಿ ವಿಟ್ಲ-ಮಂಗಳೂರು ರಸ್ತೆ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಸಾರ್ವಜನಿಕರು ಬೆಂಕಿ ನಂದಿಸುವ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿದ್ದು ವಿಟ್ಲ ಪೊಲೀಸರು ಸ್ಥಳದಲ್ಲಿದ್ದು, ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಬೆಂಕಿ ಅವಘಡದಲ್ಲಿ ಶ್ರೀ ಎಲೆಕ್ಟೋನಿಕ್ಸ್ ಅಂಗಡಿ ಸೇರಿದಂತೆ ಪಕ್ಕದಲ್ಲಿರುವ ಟೈಲರ್ ಶಾಪ್, ಫಾಸ್ಟ್ ಫುಡ್ ಹೊಟೇಲ್ ಹಾಗೂ ಫೈವ್ ಸ್ಟಾರ್ ವೈನ್ಸ್ ಅಂಗಡಿಗಳು ಸಂಪೂರ್ಣವಾಗಿ ಭಸ್ಮಗೊಂಡಿವೆ. ಅಲ್ಲದೆ ಅಮಿತ್ ಹೊಟೇಲ್ಲೂ ಬೆಂಕಿ ಪಸರಿಸಿದ್ದು, ಸಮೀಪದ ಗಣೇಶ್ ಡ್ರೈವಿಂಗ್ ಸ್ಕೂಲ್ ಕಟ್ಟಡದಿಂದಲೂ ಕಾಣಿಸಿಕೊಂಡಿದೆ.

ಬೆಂಕಿ ನಂದಿಸುವ ಕಾರ್ಯ ಮುಂದುವರಿದಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts