ಪುತ್ತೂರು: ಸಂಪ್ಯ ಮಸೀದಿ ಮುಂಭಾಗ ಬ್ರೆಜ್ಜಾ ಕಾರು ಹಾಗೂ ರಸ್ತೆ ದಾಟುತ್ತಿದ್ದ ಪಾದಚಾರಿಗೆ ಗಾಯಗೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.
ಗಂಭೀರ ಗಾಯಗೊಂಡ ಪುತ್ತು ಅವರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ.
ಮಸೀದಿ ಮುಂಭಾಗ ಆ್ಯಕ್ಟೀವಾ ನಿಲ್ಲಿಸಿ, ರಸ್ತೆ ದಾಟುತ್ತಿದ್ದಾಗ ಎದುರಿನಿಂದ ಬಂದ ಬ್ರೆಜ್ಜಾ ಕಾರು ಡಿಕ್ಕಿ ಹೊಡೆದಿದೆ.
ಬೆಳಿಗ್ಗಿನ ಹೊತ್ತು ಅಪಘಾತ ನಡೆದಿರುವುದರಿಂದ ಕೆಲ ಹೊತ್ತು ಸಂಪ್ಯದಲ್ಲಿ ವಾಹನಗಳು ಸಾಲು ಗಟ್ಟಿ ನಿಲ್ಲುವಂತಾಯಿತು.