ಫರಿದಾಬಾದ್: ರವಿವಾರ (ಸೆ.7) ಮಧ್ಯರಾತ್ರಿ ಮನೆಮಂದಿ ನಿದ್ದೆಗೆ ಜಾರಿದ ವೇಳೆ ಮನೆಯ ಎಸಿ ಕಂಪ್ರೆಸರ್ ಸ್ಪೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ ಮೂವರು ಸದಸ್ಯ ರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಹರಿಯಾಣದ ಫರಿದಾಬಾದ್‌ನಲ್ಲಿ ನಡೆದಿದೆ.
ಮೃತರನ್ನು ಸಚಿನ್ ಕಪೂರ್, ಅವರ ಪತ್ನಿ ರಿಂಕು ಕಪೂರ್ ಮತ್ತು ಅವರ ಮಗಳು ಸುಜನ್ ಕಪೂರ್ ಎಂದು ಗುರುತಿಸಲಾಗಿದೆ. ಮಗ ಮೊದಲ ಮಹಡಿಯಿಂದ ಜಿಗಿದು ಗಂಭೀರ ಗಾಯಗೊಂಡು ಆಸ್ಪ ತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಾಕು ನಾಯಿಯೂ ಸಾವು:
ಘಟನೆಯಲ್ಲಿ ಮನೆಯ ಸಾಕು ನಾಯಿ ಕೂಡ ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಧ್ಯರಾತ್ರಿ ನಡೆದ ಘಟನೆ:
ನೆರೆಹೊರೆಯವರು ಹೇರಿದಂತೆ ಮಧ್ಯರಾತ್ರಿ ಸುಮಾರು 1.30ರ ಸುಮಾರಿಗೆ ದೊಡ್ಡ ಸದ್ದು ಕೇಳಿದೆ ಏನೆಂದು ಹೊರಗೆ ಬಂದು ನೋಡಿದ ವೇಳೆ ಪಕ್ಕದ ಮನೆಯ ಮೊದಲ ಮಹಡಿಯಲ್ಲಿರುವ ಎಸಿ ಯಂತ್ರದ ಬಳಿ ಬೆಂಕಿ ಕಾಣಿಸಿ ದಟ್ಟ ಹೊಗೆ ಆವರಿಸಿತ್ತು ಈ ವೇಳೆ ಮನೆಮಂದಿ ಹೊರಬರಲಾಗದೆ ಎರಡನೇ ಮಹಡಿಗೆ ಓ ಡಿದ್ದಾರೆ ಆದರೆ ದಟ್ಟ ಹೊಗೆ ಆವರಿಸಿದ ಪರಿಣಾಮ ಹೊರ ಬರ ಲಾರದೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ,
ಕಿಟಕಿಯಿಂದ ಜಿಗಿದು ಪ್ರಾಣ ಉಳಿಸಿಕೊಂಡ ಮಗ:
ಬೆಂಕಿ ಕಾಣಿಸಿಕೊಳ್ಳುತ್ತಿದಂತೆ ಪಕ್ಕದ ಕೋಣೆಯಲ್ಲಿ ಮಲಗಿದ್ದ ಮಗ ಆರ್ಯನ್ ಕಿಟಕಿಯ ಮೂಲಕ ಹೊರ ಜಿಗಿದು ಗಂಭೀರ ಗಾಯ ಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.