ಪುತ್ತೂರು: ಸುಳ್ಯದಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಕಾರು ಹಾಗೂ ಮೈಸೂರು ಕಡೆ ತೆರಳುತ್ತಿದ್ದ ಬಸ್ ನಡುವೆ ಅಪಘಾತ ಸಂಭವಿಸಿ, ಕಾರಿನಲ್ಲಿದ್ದವರು ಗಾಯಗೊಂಡ ಘಟನೆ ಪೆರ್ನಾಜೆ ತಿರುವಿನಲ್ಲಿ ಶುಕ್ರವಾರ ನಡೆದಿದೆ.
ಕೆ.ಎಸ್.ಆರ್.ಟಿ.ಸಿ. ಬಸ್ ಹಾಗೂ ಈಟಿಯೋಸ್ ಕಾರಿನ ನಡುವೆ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಸುಳ್ಯ ಕೆವಿಜಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಅಮರಪಡ್ನೂರಿನ ಬೊಳ್ಳೂರು ನಿವಾಸಿ ಬಾಲಕೃಷ್ಣ ಗೌಡ ಹಾಗೂ ಅವರ ಪತ್ನಿ ನಿವೃತ್ತ ನರ್ಸ್ ಸುಶೀಲಾ ಅವರು ಗಾಯಗೊಂಡಿದ್ದಾರೆ.
ಅಪಘಾತ ವಲಯ ಎಂದೇ ಗುರುತಿಸಿಕೊಂಡಿರುವ ಪೆರ್ನಾಜೆಯ ಕಂಟ್ರಮಜಲು ತಿರುವಿನಲ್ಲಿ ಅಪಘಾತ ನಡೆದಿದೆ. ರಸ್ತೆಯಲ್ಲಿ ತೈಲ ಚೆಲ್ಲಿದ್ದು, ಇದರ ಮೇಲೆ ಕಾರು ಹರಿದಾಗ ಚಾಲಕನ ನಿಯಂತ್ರಣ ಕಳೆದುಕೊಂಡಿದೆ. ಪರಿಣಾಮ ಎದುರಿನಿಂದ ಬಂದ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕಾರಿನಲ್ಲಿದ್ದ ಗಾಯಾಳುಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.