ಪುತ್ತೂರು: ಹೆದ್ದಾರಿಯಲ್ಲಿ ವಾಹನವೊಂದರ ಆಯಿಲ್ ಚೆಲ್ಲಿದ ಪರಿಣಾಮ, ದ್ವಿಚಕ್ರ ವಾಹನಗಳು ಸ್ಕಿಡ್ ಆಗಿ ಬೀಳುತ್ತಿದ್ದ ದೃಶ್ಯ ಶುಕ್ರವಾರ ಮಧ್ಯಾಹ್ನ ಪುತ್ತೂರು ಹಾಗೂ ಸಂಪ್ಯದ ನಡುವೆ ಕಂಡುಬಂದಿತು.
ಸುಮಾರು 7 ಘಟನೆಗಳು ವರದಿಯಾಗಿದ್ದು, ಕೆಲ ದ್ವಿಚಕ್ರ ಸವಾರರಿಗೆ ಗಾಯವಾದ ಬಗ್ಗೆಯೂ ತಿಳಿದುಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ.
ಕಲ್ಲಾರೆ ಧನ್ವಂತರಿ ಆಸ್ಪತ್ರೆ ಮುಂಭಾಗದಲ್ಲಿ ಇಂಟರ್ ಲಾಕ್ ಅಳವಡಿಸಿರುವ ಪ್ರದೇಶದಲ್ಲಿಯೂ 2 ಘಟನೆಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಉಳಿದಂತೆ ಕಮ್ಮಾಡಿ ಮಿಲ್ ನಿಂದ ಮುಂದೆ ಇಳಿಜಾರಾಗಿರುವ ಹೆದ್ದಾರಿಯಲ್ಲಿ ಶ್ರೀ ವೆಂಕಟೇಶ್ವರ ಸಾ ಮಿಲ್ ಆಸುಪಾಸಿನಲ್ಲಿ ಘಟನೆಗಳು ನಡೆಯುತ್ತಿರುವ ಬಗ್ಗೆ ತಿಳಿದುಬಂದಿದೆ.
ಸುಗಮ ಸಂಚಾರಕ್ಕೆ ತೊಂದರೆ ಆಗಬಾರದೆಂಬ ಹಿನ್ನೆಲೆಯಲ್ಲಿ ಸ್ಥಳೀಯರು ದ್ವಿಚಕ್ರ ವಾಹನ ಸವಾರರನ್ನು ತಕ್ಷಣ ಮೇಲೆತ್ತುತ್ತಿರುವ ದೃಶ್ಯ ಕಂಡುಬರುತ್ತಿವೆ.