ಅಪರಾಧ

ಮೆಡಿಕಲ್ ಶಾಪ್ ಮಾಲಕಿಯ ಕರಿಮಣಿಸರ ಎಗರಿಸಿದ ಪ್ರಕರಣ ಪುತ್ತೂರಿನ ಇಬ್ಬರ ಬಂಧನ!!

ಆಯುರ್ವೇದ ಅಂಗಡಿಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಮೂರೂವರೆ ಪವನು ತೂಕದ ಕರಿಮಣಿ ಸರವನ್ನು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಿವಾಸಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ

akshaya college

ನೀರ್ಚಾಲು ಎಂಬಲ್ಲಿ ಆಯುರ್ವೇದ ಅಂಗಡಿಗೆ ನುಗ್ಗಿ ಮಹಿಳೆಯ ಕತ್ತಿನಲ್ಲಿದ್ದ ಮೂರೂವರೆ ಪವನು ತೂಕದ ಕರಿಮಣಿ ಸರವನ್ನು ಎಗರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪುತ್ತೂರು ನಿವಾಸಿ ಆರೋಪಿಗಳಿಬ್ಬರನ್ನು ಬಂಧಿಸಲಾಗಿದೆ.

ಕುಂಜೂರು ಪಂಜದ ಗೋಳಿಕಟ್ಟೆ ನಿವಾಸಿ ಸಂಶುದ್ದೀನ್ ಆಸ್ಕರ್ ಅಲಿ(28ವ) ಮತ್ತು ಬನ್ನೂರು ನಿವಾಸಿ ನೌಷಾದ್ ಬಿ.ಎ(37ವ.)ಬಂಧಿತ ಆರೋಪಿಗಳು. ಇವರಿಬ್ಬರನ್ನು ಫೆ.20ರಂದು ಬೆಂಗಳೂರಿನಿಂದ ಬಂಧಿಸಿರುವುದಾಗಿ ಬದಿಯಡ್ಕ ಪೊಲೀಸರು ಮಾಹಿತಿ ನೀಡಿದ್ದಾರೆ.

ಜ.11ರಂದು ಸಂಜೆ ನೀರ್ಚಾಲು ಮೇಲಿನ ಪೇಟೆಯ ಜೇನುಮೂಲೆ ದಿ.ಡಾ. ಶಂಕರನಾರಾಯಣ ಭಟ್ಟರ ಪತ್ನಿ ಸರೋಜಿನಿ ಎಸ್‌.ಎನ್. ಅವರ ಮಾಲಕತ್ವದಲ್ಲಿರುವ ರಾಘವೇಂದ್ರ ಆಯುರ್ವೇದ ಮೆಡಿಕಲ್‌ನಲ್ಲಿ ಕಳವು ನಡೆದಿತ್ತು.

ಬೈಕ್‌ನಲ್ಲಿ ಬಂದ ಯುವಕರಿಬ್ಬರಲ್ಲಿ ಒಬ್ಬ ಎದೆನೋವಿಗೆ ಔಷಧಿ ಬೇಕೆಂದು ಕೇಳುತ್ತಾ ಮೆಡಿಕಲ್ ಶಾಪ್ ಒಳಗೆ ಹೋಗಿ ಮಾಲಕಿ ಸರೋಜಿನಿ ಅವರ ಕತ್ತಿನಲ್ಲಿದ್ದ ಮೂರೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಗರಿಸಿದ್ದ. ಈತನಿಗಾಗಿ ಇನ್ನೊಬ್ಬ ಬೈಕನಲ್ಲೇ ಇದ್ದು ಕಾಯುತ್ತಿದ್ದ. ಬಳಿಕ ಇಬ್ಬರೂ ಬೈಕನ್ನೇರಿ ಪರಾರಿಯಾಗಿದ್ದರು. ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳವುಗೈದ ಆಭರಣವನ್ನು ಮಂಗಳೂರಿನ ಚಿನ್ನದಂಗಡಿಯೊಂದರಲ್ಲಿ ಬಂಧಿತ ಆರೋಪಿಗಳು ಮಾರಾಟ ಮಾಡಿದ್ದರು. ಪೊಲೀಸರು ಅಲ್ಲಿಂದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಡಿವೈಎಸ್ಪಿ ಸುನಿಲ್‌ ಕುಮಾ‌ರ್ ಅವರ ಆದೇಶದಂತೆ ಬದಿಯಡ್ಕ ಸಿ.ಐ.ಸುಬೀರ್‌, ಎಸ್.ಐ.ನಿಖಿಲ್, ಸಿಬ್ಬಂದಿಗಳಾದ ಮುಹಮ್ಮದ್, ಪ್ರಸಾದ್, ಶ್ರೀನೇಶ್ ಮೊದಲಾದವರು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Astrologer

What's your reaction?

Related Posts