ಮಹಿಳೆಯೊಬ್ಬರ ಕತ್ತು ಕುಯ್ದು ಕೊಲೆ ಮಾಡಿರುವ ಘಟನೆ ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿ ಹಿರಿಯೂರು ಕೂಡಿಗೆಯಲ್ಲಿ ನಡೆದಿದ್ದು, ಮಹಿಳೆಯ ಪತಿಯೇ ಕೃತ್ಯ ಎಸಗಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಮಂಜುಳಾ (38) ಕೊಲೆಯಾದ ಮಹಿಳೆ.
ಆಕೆಯ ಪತಿ, ಕೊಲೆ ಆರೋಪಿ ಯೋಗೇಶ್ ಪೂಜಾರಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯ ಶೀಲ ಶಂಕಿಸಿ ಯೋಗೇಶ್ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಹತ್ಯೆ ನಡೆಸಿದ ನಂತರ ಮನೆಯ ಬಾಗಿಲು ಹಾಕಿ ಪರಾರಿಯಾಗಿದ್ದನೆನ್ನಲಾಗಿದೆ.
ಸಕಲೇಶಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.