ಅಪರಾಧ

ಪೊಲೀಸ್‌ ಉಪನಿರೀಕ್ಷಕರ ಮೇಲೆ ಹಲ್ಲೆ!!

ಕರ್ತವ್ಯ ನಿರತ ಪೊಲೀಸ್ ಉಪನಿರೀಕ್ಷಕರ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಪ್ರತಾಪ್ ಗೌಡ ಎಂಬವರ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು : ಕರ್ತವ್ಯ ನಿರತ ಪೊಲೀಸ್ ಉಪನಿರೀಕ್ಷಕರ ಮೇಲೆ ಹಲ್ಲೆ ನಡೆಸಿರುವ ಆರೋಪದ ಮೇಲೆ ಪ್ರತಾಪ್ ಗೌಡ ಎಂಬವರ ವಿರುದ್ಧ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

akshaya college

ಈತನ ಮೇಲೆ ಕಾವೂರು ಠಾಣೆಯಲ್ಲಿ ಹಾಗೂ ಪುತ್ತೂರು ಠಾಣೆಯಲ್ಲಿ ಸೇರಿ ಒಟ್ಟು ನಾಲ್ಕು ಕೇಸುಗಳು ದಾಖಲಾಗಿದ್ದು, ಈಗ ಈ ಬಗ್ಗೆ ಸಂಪ್ಯ ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗಿದೆ.

ಫೆಬ್ರವರಿ 9ರಂದು ಪುತ್ತೂರು ತಾಲೂಕಿನ ಆರ್ಯಾಪುರ್ ಗ್ರಾಮದ ಸಂಪ್ಯ ಪುತ್ತೂರು ಗ್ರಾಮಾಂತರ ಠಾಣೆಯ ಎದುರು ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ, ಹಿಂಬದಿ ಸವಾರ ಹೆಟ್ ಧರಿಸದೇ ಇರುವ ಕಾರಣಕ್ಕಾಗಿ ರೇಮಂತ್ ಎಸ್ ಎಂಬವರ ಸ್ಕೂಟರ್ ರನ್ನು ತಡೆದು, ದಂಡ ಪಾವತಿಸುವಂತೆ ಹೇಳಿದಾಗ ಸ್ಕೂಟರ್ ನ ಹಿಂಬದಿ ಕುಳಿತಿದ್ದ ಪ್ರತಾಪ್ ಗೌಡ ಎಂಬಾತ ಕೆಳಗಿಳಿದು ಬಂದು ಪೋಲಿಸ್ ಅಧಿಕಾರಿಗಳಿಗೆ ಏಕವಚನದಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಿ ವಾಹನ ತಪಾಸಣೆ ಮಾಡಲು ನಿಮಗೆ ಅಧಿಕಾರ ಕೊಟ್ಟಿದ್ದು ಯಾರು ಎಂದು ಉಡಾಫೆಯಾಗಿ ಪ್ರಶ್ನಿಸಿ, ಪೊಲೀಸ್ ಅಧಿಕಾರಿ ಸಿಬ್ಬಂದಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts