pashupathi
ಅಪರಾಧ

ಪುತ್ತೂರು ತಾಲೂಕು ಪಂಚಾಯತ್ ಅಧಿಕಾರಿಯ ಪರ್ಸ್ ಎಗರಿಸಿದ ಮಹಿಳೆ!! ಸಿಸಿ ಕ್ಯಾಮರಾ ಆಧರಿಸಿ ಕಾರ್ಯಾಚರಣೆಗೆ ಮುಂದಾದ ಪುತ್ತೂರು ಪೊಲೀಸರು!

tv clinic
ಪುತ್ತೂರು ತಾಲೂಕು ಪಂಚಾಯತ್ ಅಧಿಕಾರಿಯೋರ್ವರ ಪರ್ಸ್ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು ತಾಲೂಕು ಪಂಚಾಯತ್ ಅಧಿಕಾರಿಯೋರ್ವರ ಪರ್ಸ್ ಕಳ್ಳತನ ಮಾಡಿರುವ ಘಟನೆ ವರದಿಯಾಗಿದೆ.

akshaya college

ತಾಪಂ ಯೋಜನಾಧಿಕಾರಿ ಸುಕನ್ಯಾ ಅವರು ಬಸ್ ನಲ್ಲಿ ಬರುತ್ತಿದ್ದಾಗ ಘಟನೆ ನಡೆದಿದೆ ಎಂದು ದೂರಲಾಗಿದೆ.

ಸುಕನ್ಯಾ ಅವರು ಮಂಗಳೂರಿನಿಂದ ಪುತ್ತೂರಿಗೆ ಪ್ರತಿನಿತ್ಯ ಖಾಸಗಿ ಬಸ್ ನಲ್ಲಿ ಅಗಮಿಸಿ, ಕರ್ತವ್ಯಕ್ಕೆ ಹಾಜರಾಗುತ್ತಿದ್ದರು.

ಎಂದಿನಂತೆ ಶುಕ್ರವಾರವೂ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಕಲ್ಲಡ್ಕ ದಲ್ಲಿ ಬಸ್ ಗೆ ಹತ್ತಿದ ಮಹಿಳೆಯೋರ್ವರು ಸುಕನ್ಯಾ ಕುಳಿತಿದ್ದ ಸೀಟ್ನಲ್ಲಿ ಕುಳಿತಿದ್ದರು. ಬಸ್‌ ಪುತ್ತೂರಿಗೆ ತಲುಪಿದ ಬಳಿಕ ಬಸ್ನಿಂದ ಇಳಿದ ಸುಕನ್ಯಾ ಅವರು, ಮೆಡಿಕಲ್ ಶಾಪಿಗೆ ತೆರಳಿ ಪರ್ಸ್‌ ಗೆ ತಡಕಾಡಿದ ಸಂದರ್ಭದಲ್ಲಿ ಪರ್ಸ್ ಇಲ್ಲದಿರುವುದು ಗಮನಕ್ಕೆ ಬಂದಿದೆ.

ತಕ್ಷಣವೇ ಸುಕನ್ಯಾ ಅವರು ತಾನು ಬಂದ ಬಸ್ಸಿಗೆ ಕರೆ ಮಾಡಿ ಪರ್ಸ್‌ ಕಳೆದುಕೊಂಡ ಬಗ್ಗೆ ಮಾಹಿತಿ ನೀಡಿದ್ದಾರೆ. ಬಸ್‌ ಸಿಬ್ಬಂದಿಗಳು ಬಸ್ಸಿನ ಸಿಸಿ ಕ್ಯಾಮೆರಾವನ್ನು ಪರಿಶೀಲಿಸಿದ ಸಂದರ್ಭ ಮಹಿಳೆಯು ಸುಕನ್ಯಾ ಅವರ ಬ್ಯಾಗ್ ನಿಂದ ಪರ್ಸನ್ನು ಕದಿಯುತ್ತಿರುವುದು ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಆಧರಿಸಿ ಮಹಿಳೆಯ ಪತ್ತೆಗೆ ಮುಂದಾಗಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts