Gl jewellers
ಅಪರಾಧ

ನರಭಕ್ಷಕ ಹುಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ!!

ಮಹಿಳೆಯೊಬ್ಬರನ್ನು ಆಕ್ರಮಿಸಿ ಕೊಂದು ತಿಂದ ಹೆಬ್ಬುಲಿಯ ಸೆರೆಗೆ ಅರಣ್ಯ ಇಲಾಖೆ ಶತಾಯುಗತಾಯು ಪ್ರಯತ್ನಿಸುತ್ತಿರಃವಾಗಲೇ, ಹುಲಿ ಸತ್ತ ನೆಲೆಯಲ್ಲಿ ಪತ್ತೆಯಾಗಿದೆ. 

ಈ ಸುದ್ದಿಯನ್ನು ಶೇರ್ ಮಾಡಿ

ಕೇರಳದ ವಯನಾಡಿನಲ್ಲಿ ಮಹಿಳೆಯೊಬ್ಬರನ್ನು ಆಕ್ರಮಿಸಿ ಕೊಂದು ತಿಂದ ಹೆಬ್ಬುಲಿಯ ಸೆರೆಗೆ ಅರಣ್ಯ ಇಲಾಖೆ ಶತಾಯುಗತಾಯು ಪ್ರಯತ್ನಿಸುತ್ತಿರಃವಾಗಲೇ, ಹುಲಿ ಸತ್ತ ನೆಲೆಯಲ್ಲಿ ಪತ್ತೆಯಾಗಿದೆ.

Papemajalu garady
Karnapady garady

ವಯನಾಡಿನ ಕಲ್ಪಟ್ಟ ದ ಪೀಲಿಕ್ಕಾವ್ ಎಂಬಲ್ಲಿಂದು ಬೆಳಿಗ್ಗೆ 2.30ರ ವೇಳೆ ಹುಲಿ ಪತ್ತೆಯಾಯಿತು.

ಅದರ ಕೊರಳಲ್ಲಿ ಆಳವಾದ ಗಾಯ ಮತ್ತು ದೇಹದಲ್ಲೂ ಗಾಯಗಳಿವೆ. ಹುಲಿಯ ಹೆಜ್ಜೆಯ ಜಾಡು ಹಿಡಿದು ನಡೆದ ಅರಣ್ಯಾಧಿಕಾರಿಗಳು ಹುಲಿ ಸತ್ತಿರುವುದನ್ನು ಪತ್ತೆ ಹಚ್ಚಿದರು. ನರಭಕ್ಷಕ ಹುಲಿಯನ್ನು ಸೆರೆ ಹಿಡಿಯಲಾಗದಿದ್ದರೆ ಗುಂಡಿಟ್ಟು ಕೊಲ್ಲಲು ಆದೇಶವಾಗಿತ್ತು. ಈ ಮಧ್ಯೆ ಹುಲಿ ಸತ್ತು ಪತ್ತೆಯಾಗಿದೆ.

ಹುಲಿಯ ಮೇಲಿನ ಗಾಯ ಮತ್ತದರ ಮರಣ ಹೇಗಾಯಿತೆಂದು ಮರಣೋತ್ತರ ಪರೀಕ್ಷೆಯಿಂದ ತಿಳಿಯಬೇಕಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts