ಅಪರಾಧ

ಸಹಕಾರಿ ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆಗೆ ಶರಣು!!

GL
ಮದುವೆ ನಿಶ್ಚಿಯವಾದ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣು

ಈ ಸುದ್ದಿಯನ್ನು ಶೇರ್ ಮಾಡಿ

ಮದುವೆ ನಿಶ್ಚಿಯವಾದ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಜ. 24ರ ಶುಕ್ರವಾರ ಸಂಜೆ ಮೀಂಜ ಸಮೀಪದ ಬೆಟ್ಟದಲ್ಲಿ ನಡೆದಿದೆ. ಅಜಿತ್ ಕುಮಾರ್ (28) ಆತ್ಮಹತ್ಯೆಗೆ ಶರಣಾದ ಯುವಕ.

chennai-shopping
maithri

ಫೆಬ್ರವರಿ ಎರಡರಂದು ವಿವಾಹ ನಿಗದಿಯಾಗಿತ್ತು. ಸಂಜೆ ಮನೆ ಸಮೀಪದ ಮರವೊಂದರಲ್ಲಿ ನೇಣು ಬಿಗಿದು ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅಜಿತ್ ಕುಮಾ‌ರ್ ಮಜಿಬೈಲ್ ಸೇವಾ ಸಹಕಾರಿ ಬ್ಯಾಂಕ್ ನ ಉಪ್ಪಳ ಶಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಜಿತ್ ಗೆ ಹೊಸಂಗಡಿ ಸಮೀಪದ ಯುವತಿ ಜೊತೆ ವಿವಾಹ ನಿಶ್ಚಯವಾಗಿತ್ತು.

ಮನೆಯವರು ವಿವಾಹಕ್ಕೆ ತಯಾರಿಗಾಗಿ ಸಾಮಾಗ್ರಿಗಳನ್ನು ಖರೀದಿಸಲು ಪೇಟೆಗೆ ತೆರಳಿದ್ದರು. ಮನೆಯಲ್ಲಿ ಚಿಕ್ಕಪ್ಪ ಮಾತ್ರ ಇದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಕೃತ್ಯ ಎಸಗಲಾಗಿದೆ. ಸಂಜೆ ಅಜಿತ್ ಮನೆ ಮುಂಭಾಗದ ಮಾವಿನ ಮರದಲ್ಲಿ ಕೇಬಲ್ ವಯರ್ ನಲ್ಲಿ ನೇಣು ಬಿಗಿದಿರುವುದನ್ನು ಮನೆಯವರು ಗಮನಿಸಿದ್ದು, ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದರು. ಈ ಬಗ್ಗೆ ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 105