ಅಪರಾಧ

ಅಕ್ರಮ ಕೆಂಪುಕಲ್ಲು ಸಾಗಾಟಕ್ಕೆ ಕಡಿವಾಣ: ವಿಟ್ಲದಲ್ಲಿ ಎರಡು ಲಾರಿಗಳ ಜಪ್ತಿ

GL

ಈ ಸುದ್ದಿಯನ್ನು ಶೇರ್ ಮಾಡಿ

ವಿಟ್ಲ: ಕೇರಳದಿಂದ ಪರವಾನಿಗೆ ಇಲ್ಲದೆ ಕೆಂಪುಕಲ್ಲುಗಳನ್ನು ಕರ್ನಾಟಕಕ್ಕೆ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ವಿಟ್ಲ ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಫೆಬ್ರವರಿ 25ರಂದು ಮಧ್ಯಾಹ್ನ, ಪೆರುವಾಯಿ ಮಾರ್ಗವಾಗಿ ಅಕ್ರಮವಾಗಿ ಕೆಂಪುಕಲ್ಲು ಸಾಗಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ಕಾ&ಸು) ರಾಮಕೃಷ್ಣ ಅವರಿಗೆ ಲಭಿಸಿತು. ತಕ್ಷಣವೇ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಬೆರಿಪದವು ಬಳಿ ವಾಹನ ತಪಾಸಣೆ ನಡೆಸಲಾಯಿತು.

chennai-shopping
maithri

ತಪಾಸಣೆ ವೇಳೆ ಕೆಂಪುಕಲ್ಲುಗಳನ್ನು ತುಂಬಿಕೊಂಡಿದ್ದ KA-21-C-0562 ಹಾಗೂ KA-12-A-2252 ನೋಂದಣಿಯ ಎರಡು ಲಾರಿಗಳನ್ನು ತಡೆಹಿಡಿಯಲಾಯಿತು. ಮೊದಲ ಲಾರಿಯ ಚಾಲಕ ವಿಟ್ಲ ನಿವಾಸಿ ಸಾಧಿಕ್ (25) ಹಾಗೂ ಎರಡನೇ ಲಾರಿಯ ಚಾಲಕ ವಿಟ್ಲ ನಿವಾಸಿ ಮೊಹಮ್ಮದ್ (46) ಎಂದು ಗುರುತಿಸಲಾಗಿದೆ.

ಪರಿಶೀಲನೆಯ ವೇಳೆ, ಕೇರಳದ ಧರ್ಮತ್ತಡ್ಕದಿಂದ ವೇಣು ಎಂಬವರು ಕೆಂಪುಕಲ್ಲುಗಳನ್ನು ಲೋಡ್ ಮಾಡಿ ಕಳುಹಿಸಿದ್ದಾಗಿ ತಿಳಿದುಬಂದಿದೆ. ಆದರೆ ಸಾಗಾಟಕ್ಕೆ ಅಗತ್ಯವಾದ ಯಾವುದೇ ಮಾನ್ಯ ಪರವಾನಿಗೆ ಅಥವಾ ದಾಖಲೆಗಳು ಲಭ್ಯವಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.ಪೊಲೀಸರು ಇಬ್ಬರು ಚಾಲಕರನ್ನು ವಶಕ್ಕೆ ಪಡೆದು, ಲೋಡ್ ಸಹಿತ ಲಾರಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 49/2026ರಡಿ ಭಾರತೀಯ ನ್ಯಾಯ ಸಂಹಿತೆ 2023ರ ಕಲಂ 303(2), ಗಣಿ ಮತ್ತು ಖನಿಜ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ 1957ರ ಕಲಂ 4(1), 21 ಹಾಗೂ ಕರ್ನಾಟಕ ಅಲ್ಪಖನಿಜ ಸಂರಕ್ಷಣೆ ನಿಯಮಗಳು 1994ರ ಕಲಂ 3 ಮತ್ತು 44ರಡಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಗೃಹಬಂಧನದಲ್ಲಿದ್ದ ಮಹಿಳೆ, ಮಕ್ಕಳ ರಕ್ಷಣೆ – ಪತಿ ವಶಕ್ಕೆ | ಭೂಷಣ್ ಬೋರಸೆ ನೇತೃತ್ವದ ತಂಡದಿಂದ ಕಾರ್ಯಾಚರಣೆ

ಪತಿಯಿಂದಲೇ ಗೃಹಬಂಧನಕ್ಕೊಳಗಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ಅನುಭವಿಸುತ್ತಿದ್ದ ಮಹಿಳೆ ಮತ್ತು…

1 of 106