ಅಪರಾಧ

ಗಾಂಜಾ ಸೇವನೆ ಪ್ರಕರಣ – ಕುದ್ರೋಳಿ ಗ್ರೀನ್ ಪಾರ್ಕ್ ಬಳಿ ವ್ಯಕ್ತಿ ಬಂಧನ!

GL

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಕುದ್ರೋಳಿ ಗ್ರೀನ್ ಪಾರ್ಕ್‌ ಬಳಿ ಅನುಮಾನಾಸ್ಪದವಾಗಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ.

chennai-shopping
maithri

ಬಂದರು ಅನ್ಸಾರಿ ರೋಡ್ ನಿವಾಸಿ ಮಹಮ್ಮದ್ ಹನೀಫ್ (42) ಬಂಧಿತ ವ್ಯಕ್ತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಸ್ತು ಕರ್ತವ್ಯದಲ್ಲಿದ್ದ ಬಂದರು ಠಾಣೆ ಪೊಲೀಸರು ಆತನ ಅಸಾಮಾನ್ಯ ವರ್ತನೆಯನ್ನು ಗಮನಿಸಿ ವಿಚಾರಣೆಗೆ ಒಳಪಟ್ಟಾಗ, ಗಾಂಜಾ ಸೇವಿಸಿರುವುದಾಗಿ ಹನೀಫ್ ಒಪ್ಪಿಕೊಂಡಿದ್ದಾನೆ. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದೆ.

ಹನೀಫ್ ವಿರುದ್ಧ NDPS ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 105