ಉಡುಪಿ: ಕಾಣೆಯಾಗಿದ್ದ ಪೆರ್ಡೂರು ಗ್ರಾಮದ ಅಲಂಗಾರು ನಿವಾಸಿ ಶ್ರೀಶಾನ್ ಶೆಟ್ಟಿ (15) ಎಂಬ ಬಾಲಕನ ಮೃತದೇಹವು ಸೋಮವಾರ ಪೆರ್ಡೂರು ಬಳಿಯ ಅಲಂಗಾರು ಹೊಳೆಬಾಗಿಲು ನದಿಯಲ್ಲಿ ಪತ್ತೆಯಾಗಿದೆ.
ಶ್ರೀಶಾನ್ ಭಾನುವಾರ ತನ್ನ ಸ್ನೇಹಿತನೊಂದಿಗೆ ಸ್ನಾನ ಮಾಡಲು ನದಿಗೆ ಹೋಗಿದ್ದನು. ಸ್ನಾನ ಮಾಡುವಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಘಟನೆಯಿಂದ ಭಯಭೀತನಾದ ಅವನ ಸ್ನೇಹಿತನು ನಡೆದ ಸಂಗತಿಯನ್ನು ಬಹಿರಂಗಪಡಿಸಿರಲಿಲ್ಲ.
ಕುಟುಂಬದ ಸದಸ್ಯರು ರಾತ್ರಿಯಿಡೀ ಬಾಲಕನಿಗಾಗಿ ಹುಡುಕಾಟ ನಡೆಸಿದರೂ ಸಹ, ಆತ ಪತ್ತೆಯಾಗಲಿಲ್ಲ. ನಂತರ, ಪೊಲೀಸರು ಶ್ರೀಶಾನ್ ಸ್ನೇಹಿತನನ್ನು ವಿಚಾರಣೆಗೊಳಪಡಿಸಿದಾಗ ಘಟನೆಯ ಬಗ್ಗೆ ತಿಳಿದುಬಂದಿದೆ.
ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























