ಉಪ್ಪಿನಂಗಡಿ: ಹೋಟೆಲ್ ಕಾರ್ಮಿಕ ಮಹಡಿಯಿಂದ ಬಿದ್ದು ಮೃತಪಟ್ಟ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ನ. 4ರಂದು ಘಟನೆ ನಡೆದಿದ್ದು, ಮೃತರನ್ನು ಬೆಳ್ತಂಗಡಿಯ ಉರುವಾಲು ಗ್ರಾಮದ ಬನಾರಿ ನಿವಾಸಿ ಗಣೇಶ್ ನಾಯ್ಕ್ (60) ಎಂದು ಗುರುತಿಸಲಾಗಿದೆ.
ಮೊದಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಟೇಲೊಂದರಲ್ಲಿ ಕಾರ್ಮಿಕರಾಗಿದ್ದು, ನಸುಕಿನ ವೇಳೆ ಎದ್ದು ಕಾರಿಡಾರ್ ಬಳಿ ಬಂದಾಗ ಅಯತಪ್ಪಿ ಕೆಳಗಿನ ತೋಡಿಗೆ ಬಿದ್ದಿದ್ದಾರೆ ಎಂದು ಹೇಳಲಾಗಿದೆ.
ತಲೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























