ವಿಟ್ಲ: ಅಪಘಾತಕ್ಕೀಡಾಗಿದ್ದ ಅಪ್ರಾಪ್ತ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನ ಪ್ರಕರಣದಲ್ಲಿ ಬಂಟ್ವಾಳ ನ್ಯಾಯಾಲಯ ವಿಚಾರಣೆ ನಡೆಸಿ ತೀರ್ಪು ನೀಡಿದೆ.
ದ್ವಿಚಕ್ರ ವಾಹನದ ಆರ್.ಸಿ. ಮಾಲಕ ಮಹಮ್ಮದ್ ಅನೀಸ್ ಅವರಿಗೆ 32 ಸಾವಿರ ರೂ. ದಂಡ ವಿಧಿಸಲಾಗಿದೆ.
ವಿಟ್ಲ ಪೊಲೀಸ್ ಠಾಣಾ ಅಕ್ರ 74/2025 ಕಲಂ: U/s: 281,125(a) BNS and U/s: 4(1),181,146,196,199 A (1) , 190(2) IMV Act and U/s: 115CMV Rule ಪ್ರಕರಣ ದಾಖಲಿಸಲಾಗಿತ್ತು.
ವಿಚಾರಣೆ ಕೈಗೆತ್ತಿಕೊಂಡ ಬಂಟ್ವಾಳ ಎಸಿ ಜೆ ಮತ್ತು ಜೆ ಎಂ ಎಪ್ ಸಿ ನ್ಯಾಯಾಲಯ ಬಂಟ್ವಾಳ ವಿಚಾರಣೆ ನಡೆಸಿ, ಆರೋಪಿ ವಾಹನದ ಆರ್ ಸಿ ಮಾಲಕ ಮಹಮ್ಮದ್ ಅನೀಸ್ ಅವರಿಗೆ 32000 ರೂ. ದಂಡ ವಿಧಿಸಿದೆ.
























