pashupathi
ಅಪರಾಧ

ಸಿಗರೇಟಿನೊಳಗಿತ್ತು ಗಾಂಜಾ: ಸೇವಿಸಿದಾತ ಪೊಲೀಸ್ ವಶ!

tv clinic

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು: ಬಿಜೈ ಆನೆಗುಂಡಿಯ ಸಾರ್ವಜನಿಕ ರಸ್ತೆಯಲ್ಲಿ ಸಿಗರೇಟಿನೊಳಗೆ ಗಾಂಜಾ ತುಂಬಿಸಿ ಸೇದುತ್ತಿದ್ದ ಆರೋಪದ ಮೇರೆಗೆ ಕೋಡಿಕಲ್ ಕಲ್ಬಾವಿ ರಸ್ತೆಯ ನಿವಾಸಿಯೋರ್ವನನ್ನು ಬಂಧಿಸಲಾಗಿದೆ.

ಬಂಧಿತನನ್ನು ಗಿರೀಶ್ ಕೆ. (24) ಎಂದು ಗುರುತಿಸಲಾಗಿದೆ.

ಪೊಲೀಸರು ಗಸ್ತು ನಿರತಾಗಿದ್ದ ವೇಳೆ ಗಿರೀಶ್ ಸಿಗರೇಟ್ ಸೇದುತ್ತಿದ್ದು, ಸಂಶಯದ ಮೇರೆಗೆ ಆತನನ್ನು ವಿಚಾರಣೆಗೊಳಪಡಿಸಿದಾಗ ಮಾದಕ ವಸ್ತುವನ್ನು ಸಿಗರೇಟಿನೊಳಗೆ ತುಂಬಿಸಿ ಸೇದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ವೈದ್ಯಕೀಯ ಪರೀಕ್ಷೆಗೆ ಒಳ ಪಡಿಸಿದಾಗ ಗಾಂಜಾ ಸೇವನೆ ದೃಢ ಪಟ್ಟಿದೆ. ಅದರಂತೆ ಆರೋಪಿಯ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts