ಅಪರಾಧ

ಗಣಪತಿ ವಿಸರ್ಜನೆ ವೇಳೆ ಗಲಾಟೆ: ಜಗಳ ಬಿಡಿಸಲು ಹೋದ ಎಎಸ್ಐ ಮೇಲೆ ಹಲ್ಲೆ!

GL

ಈ ಸುದ್ದಿಯನ್ನು ಶೇರ್ ಮಾಡಿ

ಗಣಪತಿ ವಿಸರ್ಜನೆ ನಡೆಯುತ್ತಿದ್ದ ವೇಳೆ ಯುವಕರ ಗುಂಪೊಂದು ಗಲಾಟೆ ಮಾಡುತ್ತಿತ್ತು. ಈ ವೇಳೆ ಘಟನಾ ಸ್ಥಳಕ್ಕೆ ತೆರಳಿದ ಭದ್ರಾವತಿಯ ಪೇಪ‌ರ್ ಟೌನ್ ಠಾಣೆ ಎಎಸ್ ಐ ಯಲ್ಲಪ್ಪ ಅವರ ತಲೆಯ ಹಿಂಬದಿಗೆ ಮರದ ರೀಪಿನಿಂದ ಯುವಕರ ಗುಂಪು ಹಲ್ಲೆ ನಡೆಸಿದೆ.

chennai-shopping
maithri

ಹಳೇ ವೈಷಮ್ಯದ ಕಾರಣಕ್ಕೆ 8-10 ಯುವಕರು ಗಲಾಟೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ವೇಳೆ ಮಾಜಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಗೌಡ ಮತ್ತು ಪತ್ನಿ ಮೇಲೆ ಯುವಕರು ಹಲ್ಲೆ ಮಾಡುತ್ತಿದ್ದ ವೇಳೆ ಎಎಸ್ಐಗಲಾಟೆ ಬಿಡಿಸಲು ಹೋಗಿದ್ದಾರೆ ಎಂದು ಹೇಳಲಾಗಿದೆ.

ಹಲ್ಲೆಗೊಳಗಾದ ಎಎಸ್ಐ ಯಲ್ಲಪ್ಪರಿಗೆ ಭದ್ರಾವತಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಭದ್ರಾವತಿಯ ಪೇಪ‌ರ್ ಟೌನ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

1 of 105