ಧರ್ಮಸ್ಥಳದ ಬಂಗ್ಲೆಗುಡ್ಡೆಯಲ್ಲಿ ಅಸ್ಥಿ ಪಂಜರ ರಹಸ್ಯ ಪ್ರಕರಣ ಶೋಧಕ್ಕೆ ತೆರಳಿದ ಎಸ್‌ಐಟಿಯ ಬೃಹತ್ ತಂಡಕ್ಕೆ ನಿನ್ನೆ ಸಿಕ್ಕಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ ಐವರ ಅವಶೇಷಗಳು..!
ಎಸ್‌ಐಟಿ ಬಂಗ್ಲೆಗುಡ್ಡೆಗೆ ತೆರಳಿದ ಸಂದರ್ಭ ಐದು ತಲೆಬುರುಡೆ ಸಹಿತ ಮಾನವ ಮೂಳೆಗಳ ಅವಶೇಷಗಳು ಪತ್ತೆಯಾಗಿವೆ.
ಸೌಜನ್ಯ ಮಾವ ವಿಠಲ್ ಗೌಡ ತೋರಿಸಿದ ಸ್ಥಳಗಳ ಸಹಿತ ಇಡೀ ಬಂಗ್ಲೆಗುಡ್ಡೆಯನ್ನೇ ಎಸ್‌ಐಟಿ ಶೋಧಕ್ಕೆ ಇಳಿದಿದೆ. ಬುರುಡೆ ಹಾಗೂ ಅಸ್ಥಿಪಂಜರ ದೊರೆತ ಸ್ಥಳಗಳನ್ನು SIT ಅಧಿಕಾರಿಗಳು ಮಾರ್ಕಿಂಗ್ ಮಾಡಿ ಸ್ಥಳಗಳನ್ನು ಸೀಲ್ ಮಾಡಿದ್ದಾರೆ.
ನಿನ್ನೆ ತಡರಾತ್ರಿವರೆಗೂ ಮಹಜರ್ ಪ್ರಕ್ರಿಯೆ ನಡೆದಿದ್ದು, ಪ್ರಕ್ರಿಯೆ ಮುಗಿಸಿ ಎಲ್ಲಾ ಅವಶೇಷಗಳನ್ನು ವಶಕ್ಕೆ ಪಡೆದಿದ್ದಾರೆ.
ಸೆ. 18 ಇಂದೂ ಕೂಡ ಮೂಳೆಗಳಿಗಾಗಿ ಬಂಗ್ಲೆಗುಡ್ಡೆಯಲ್ಲಿ ಮುಂದುವರಿದ ಶೋಧ ಪ್ರಕ್ರಿಯೆ ನಡೆಯಲಿದೆ. ಬಂಗ್ಲೆಗುಡ್ಡೆಗೆ ಬಿಗಿ ಬಂದೋಬಸ್ತ್ ಹಾಕಲಾಗಿದೆ.