ಕಲ್ಲು ಲಾರಿಯ ಮಾಲೀಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಬಾಲು ಎಂದು ಗುರುತಿಸಲಾಗಿದೆ.
ಕಳೆದ ಕೆಲವು ತಿಂಗಳುಗಳಿಂದ ಮರಳು, ಕಲ್ಲು ಸಾಗಾಟ ಮಾಡದಂತೆ ಸರ್ಕಾರ ಕೈಗೊಂಡ ಜನವಿರೋಧಿ ಕ್ರಮದಿಂದ ಕಲ್ಲು, ಮರಳು ಸಾಗಾಟದ ಲಾರಿ ಚಾಲಕರು ಸೇರಿದಂತೆ ಕಟ್ಟಡ ಕಾರ್ಮಿಕರು ಹೈರಾಣಾಗಿದ್ದಾರೆ. ಇತ್ತ ಕೆಲಸವಿಲ್ಲದಿದ್ದರೂ ವಾಹನ ಸಾಲದ ಕಂತು ಕಟ್ಟಬೇಕಾಗಿತ್ತು. ಕಂತು ಪಾವತಿಸದಿದ್ದರೆ ಫೈನಾನ್ಸ್ ಸಿಬ್ಬಂದಿ ನಿತ್ಯ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದ ಚಾಲಕ/ ಮಾಲೀಕ ವಿಷ ಸೇವಿಸಿದ್ದಾರೆ ಎಂದು ತಿಳಿದುಬಂದಿದೆ.
ಆತ್ಮಹತ್ಯೆಗೆ ಯತ್ನಿಸಿದ ಚಾಲಕ/ಮಾಲೀಕನನ್ನು ಸುಳ್ಯ ತಾಲೂಕಿನ ಎಲಿಮಲೆಯ ಬಾಲು ಎಂದು ಗುರುತಿಸಲಾಗಿದೆ. ಅವರನ್ನು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.