ಅಪರಾಧ

ಪುತ್ತೂರು:ಮಹಿಳೆಯ ಶವ ಪತ್ತೆ ಪ್ರಕರಣ: ಪತಿಯ ಸಹೋದರನಿಂದ ಕೊಲೆ: ಪ್ರಕರಣ ದಾಖಲು..!!

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಿನಾಂಕ 06.08.2025 ರಂದು ದಾಖಲಾಗಿದ್ದ ಯು ಡಿ ಆರ್ 22 24/2025 0 194 (3)(iv) BNSS 2023 ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ಮೃತ ಮಮತಾ ರವರ ಗಂಡ ಗಣಪತಿ ರಾಮಣ್ಣಗೌಡ (44) ರವರು ನೀಡಿದ ದೂರಿನಂತೆ, ಪಿರ್ಯಾದಿರವರ ಪತ್ನಿ ಮಮತಾರವರನ್ನು, ಪಿರ್ಯಾದಿರವರ ಸಹೋದರನಾದ ಆರೋಪಿ ಬಂಟ್ವಾಳ ಕೆದಿಲ ನಿವಾಸಿ ಲೋಕಯ್ಯ  ಸುಂದರ ಎಂಬಾತನು, ಆತನ ವಿವಾಹ ವಿಚ್ಛೇದನದ ಪರಿಹಾರ ಹಣದ ವಿಚಾರದಲ್ಲಿ ಮನಸ್ತಾಪ ಉಂಟಾಗಿ, ದಿನಾಂಕ 06.08.2025 ರಂದು ಬಂಟ್ವಾಳ, ಕೆದಿಲ ಗ್ರಾಮದ ವಳಕುಮೇರು ಎಂಬಲ್ಲಿ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿ, ಪ್ರಜ್ಞೆ ತಪ್ಪಿದ ನಂತರ ಹರಿಯುವ ನೀರಿಗೆ ದೂಡಿ ಹಾಕಿರುವುದರಿಂದ ಮಮತಾರವರು ಮೃತಪಟ್ಟಿರುವುದಾಗಿ ನೀಡಿದ ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ: ២.៥:69/2025 : 115(2),103(1) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts