ಟೆನಿಸ್ ಪ್ಲೇಯರ್ ಆಗಿ ಗುರುತಿಸಿಕೊಂಡಿದ್ದ ರಾಧಿಕಾ ಯಾದವ್ ದುರಂತ ಅಂತ್ಯ ಕಂಡಿದ್ದಾಳೆ.
ಸ್ವತಃ ತಂದೆಯೇ ಮಗಳಿಗೆ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ನಡೆದಿದೆ.
ಗುರಗಾಂವ್‌ನ ಸೆಕ್ಟರ್ 57 ಮನೆಯಲ್ಲಿ ಈ ಘಟನೆ ನಡೆದಿದೆ. ತಂದೆ ಹಾರಿಸಿದ 5 ಸುತ್ತುಗಳ ಗುಂಡಿನಲ್ಲಿ ಮೂರು ರಾಧಿಕಾ ದೇಹ ಹೊಕ್ಕಿದೆ. ಸ್ಥಳದಲ್ಲೇ ರಾಧಿಕಾ ಯಾದವ್ ಮೃತಪಟ್ಟಿದ್ದಾರೆ. ತಂದೆ ಪೊಲೀಸರಿಗೆ ಶರಣಾಗಿದ್ದಾರೆ.
ಟೆನಿಸ್ ಪ್ಲೇಯರ್ ಆಗಿದ್ದ ರಾಧಿಕಾ ಯಾದವ್ ಹರ್ಯಾಣ ರಾಜ್ಯ ತಂಡದಲ್ಲಿ ಸ್ಥಾನ ಪಡೆದಿದ್ದಳು. ಆದರೆ ಇತ್ತೀಚಿನ ದಿನಗಳಲ್ಲಿ ರಾಧಿಕಾ ಯಾದವ್ ಟೆನಿಸ್ ಆಸಕ್ತಿ ಕಳೆದುಕೊಂಡಿದ್ದು ಮಾತ್ರವಲ್ಲ, ಹೆಚ್ಚಿನ ಸಮಯ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಕಳೆಯಲು ಆರಂಭಿಸಿದ್ದಳು. ಇದು ತಂದೆಯ ಆಕ್ರೋಶಕ್ಕೆ ಕಾರಣವಾಗಿತ್ತು. ಹಲವರು ಬಾರಿ ಈ ಕುರಿತು ಎಚ್ಚರಿಕೆ ನೀಡಿದ್ದಾರೆ.
ಗುರುವಾರ ರಾಧಿಕಾ ಯಾದವ್ ಮಾಡಿದ್ದ ಒಂದು ರೀಲ್ಸ್ ತಂದೆ ಸಹನೆ ಕಟ್ಟೆ ಒಡೆದಿದೆ. ಈ ರೀಲ್ಸ್ ಡಿಲೀಟ್ ಮಾಡುವಂತೆ ಸೂಚಿಸಿದ್ದಾರೆ. ಸಭ್ಯತೆ ಮೀರಿ ಹೋಗಬಾರದು ಎಂದು ಕಿವಿ ಮಾತು ಹೇಳಿದ್ದಾರೆ.
ರೀಲ್ಸ್ ವಿಚಾರವಾಗಿ ತಂದೆ ಹಾಗೂ ಮಗಳ ನಡುವೆ ವಾಗ್ವಾದ ನಡೆದಿದೆ. ರೀಲ್ಸ್ ಡಿಲೀಟ್ ಮಾಡಲು ಹಾಗೂ ತಂದೆಯ ಕಿವಿಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರಾಧಿಕಾ ಯಾದವ್ ಮತ್ತಷ್ಟು ಇದೇ ರೀತಿ ರೀಲ್ಸ್ ಮಾಡುವುದಾಗಿ ಹೇಳಿದ್ದಾಳೆ.
ಇದರಿಂದ ರಾಧಿಕಾ ಯಾದವ್ ತಂದೆ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ತನ್ನ ಬಳಿ ಇದ್ದ ಲೈಸೆನ್ಸ್ ರಿವಾಲ್ವರ್‌ನಿಂದ ತನ್ನ ಮಗಳ ಮೇಲೆ 5 ಸುತ್ತಿನ ಗುಂಡು ಹಾರಿಸಿದ್ದಾರೆ. ಈ ಪೈಕಿ ಮೂರು ಗುಂಡುಗಳು ರಾಧಿಕಾ ದೇಹ ಹೊಕ್ಕಿವೆ.
ಗುಂಡಿನ ಶಬ್ದ ಕೇಳಿಸುತ್ತಿದ್ದಂತೆ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ.
ಓಡೋಡಿ ಬಂದ ಕುಟುಂಬಸ್ಥರು ರಾಧಿಕಾ ಯಾದವಳನ್ನು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ರಾಧಿಕಾ ಯಾದವ್ ಬದುಕುಳಿಯಲಿಲ್ಲ.
ತನಿಖೆ ಆರಂಭಿಸಿರುವ ಪೊಲೀಸರು ರಾಧಿಕಾ ಯಾದವ್ ಮನೆಯಿಂದ ಲೈಸೆನ್ಸ್ ರಿವಾಲ್ವರ್, ಗುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.