ಸುಹಾಸ್ ಶೆಟ್ಟಿ ಹತ್ಯೆಗೆ ಬಾರಿ ಸಂಚು ನಡೆದಿದ್ದು ಕಾಂಟ್ರಾಕ್ಟ್ ಕಿಲ್ಲರ್ಸ್ ಬಳಸಿ ಈ ದಾಳಿ ನಡೆಸಿರುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದಾರೆ. ಇದೀಗ ಪೊಲೀಸರು ಒಟ್ಟು 8 ಶಂಕಿತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಬಯಲಾಗಿದೆ.
ಪೊಲೀಸರು ವಶಕ್ಕೆ ಪಡೆದಿರುವ 8 ಶಂಕಿತ ಆರೋಪಿಗಳ ಪೈಕಿ ಇಬ್ಬರು ಹಿಂದೂ ಯುವಕರು ಎಂದು ಹೇಳಲಾಗುತ್ತಿದೆ. ವಿಡಿಯೋ ಸಾಕ್ಷ್ಯದ ಆಧಾರದ ಮೇಲೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದೀಗ 8 ಮಂದಿ ಬಂಧಿತರನ್ನು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಆರೋಪಿಗಳ ತಂಡ ಅಡ್ಡಗಟ್ಟಿ ಮಂಗಳೂರಿನ ಬಜೈ ಸಮೀಪ ಹತ್ಯೆ ಮಾಡಿತ್ತು. ಮೇ.01ರಂದು ಈ ಘಟನೆ ನೆಡೆದಿತ್ತು. ನಿನ್ನೆ ಸುಹಾಶ್ ಶೆಟ್ಟಿ ಅಂತ್ಯಸಂಸ್ಕಾರ ಕಾರಿಂಜದ ಸ್ವಗೃಹದಲ್ಲಿ ನಡೆದಿದೆ. ಈ ಘಟನೆಯಿಂದ ರಾಜ್ಯಾದ್ಯಂತ ಆಕ್ರೋಶಗಳು ಹೆಚ್ಚಾಗುತ್ತಿದೆ. ಇತ್ತ ಪೊಲೀಸರು ಕಾರ್ಯಪ್ರವೃತ್ತರಾಗಿದ್ದು, 8 ಆರೋಪಿಗಳ ವಿಚಾರಣೆ ತೀವ್ರಗೊಳಿಸಿದ್ದಾರೆ. ವಶಕ್ಕೆ ಪಡೆದಿರುವ ಕೆಲ ಆರೋಪಿಗಳು ದಕ್ಷಿಣ ಕನ್ನಡದಲ್ಲೇ ಅವಿತು ಕುಳಿತಿದ್ದರು. ಆರೋಪಿಗಳ ವಶಕ್ಕೆ ಪಡೆದಿರುವ ಕುರಿತು ಇಂದು ಮಂಗಳೂರು ಕಮಿಷನರ್ ಅಧಿಕೃತವಾಗಿ ಸುದ್ದಿಗೋಷ್ಠಿ ನಡೆಸುವ ಸಾಧ್ಯತೆ ಇದೆ.
ಹಿಂದೂ ಕಾರ್ಯಕರ್ತನ ಮೇಲಿನ ದಾಳಿಯಲ್ಲಿ ಹಿಂದೂ ಯುವಕರನ್ನೇ ಬಳಸಲಾಗಿದೆ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ. ಚಿಕ್ಕಮಗಳೂರಿನ ಕಳಸ ಮೂಲದ ಇಬ್ಬರು ಹಿಂದೂ ಯವಕರು ಮಂಗಳೂರಿನ ನಟೋರಿಯಸ್ ಸಫಾನ್ ಗ್ಯಾಂಗ್ ಜೊತೆ ಸೇರಿಕೊಂಡಿದ್ದರು. ಸಫ್ಘಾನ್ ಗ್ಯಾಂಗ್ ಜೊತೆಗಿದ್ದ ಇಬ್ಬರು ಹಿಂದೂ ಯುವಕರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.