ಸುಮಾರು ನಾಲ್ಕು ವರ್ಷಗಳ ಹಿಂದೆ ಭಿವಂಡಿಯ 17 ವರ್ಷದ ಬಾಲಕನ ಕೊಲೆ ಪ್ರಕರಣ ಹೊಸ ತಿರುವುವನ್ನು ಪಡೆದುಕೊಂಡಿದೆ.
2020ರಲ್ಲಿ ಭಿವಂಡಿಯ ನವಿಬಸ್ತಿ ಪ್ರದೇಶದಿಂದ ಶೋಯಿರ್ ಶೇಖ್ ಎಂಬ ಬಾಲಕ ನಾಪತ್ತೆಯಾಗಿದ್ದನು. ಈ ಬಗ್ಗೆ ಪ್ರಕರಣ ದಾಖಲಿಸಿದ ಮನೆಯವರು ಬಾಲಕ ಮರಳಿ ಮನೆಗೆ ಬರುತ್ತೆ ಎಂದು ಆಸೆಯಿಂದ ಕಾದು ಕುಳಿತ್ತಿದ್ದಾರೆ.
ಈ ಪ್ರಕರಣವನ್ನು ಭೇದಿಸಿದ ಮಹಾರಾಷ್ಟ್ರ ಪೊಲೀಸರು ಬಾಲಕ ಕೊಲೆಯಾಗಿರುವುದು ತಿಳಿದು ಬಂದಿದೆ.
ಈ ಘಟನೆಗೆ ಸಂಬಂಧಿಸಮುಸ್ಲಿಂ ಧರ್ಮಗುರು ಮೌಲಾನಾ ಗುಲಾಮ್ ರಬ್ಬಾನಿ ಶೇಖ್ ನನ್ನು ಬಂಧಿಸಲಾಗಿದೆ. ಇದೀಗ, ಇದನ್ನು ತಾವು ನಂಬಿದ್ದ ಧರ್ಮಗುರುಗಳೇ ಬಾಲಕನನ್ನು ಕೊಲೆ ಮಾಡಿದ್ದು ಎಂದು ತಿಳಿದು ಆಘಾತವಾಗಿದೆ.
ಮೌಲಾನಾ ತನ್ನ ನೆಹರು ನಗರ ಪ್ರದೇಶದಲ್ಲಿರುವ ಅಂಗಡಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದ. ಇದನ್ನು ಶೋಯಿರ್ ಶೇಖ್ ನೋಡಿದ್ದಾನೆ. ಹೀಗಾಗಿ ಭಯದಿಂದ ಮೌಲಾನಾ ಆತನ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಆತನ ದೇಹವನ್ನು ತುಂಡುಗಳಾಗಿ ಕತ್ತರಿಸಿ ತನ್ನ ಅಂಗಡಿಯ ಕೆಳಗೆ ಹೂತುಹಾಕಿದ್ದಾನೆ.
ಬಾಲಕ ನಾಪತ್ತೆಯಾಗಿ ಸುಮಾರು ಮೂರು ವರ್ಷಗಳ ಬಳಿಕ ಸ್ಥಳೀಯರೊಬ್ಬರು ಬಾಲಕ ನಾಪತ್ತೆಯಲ್ಲಿ ಮೌಲಾನಾ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಬಾಲಕನ ಕುಟುಂಬಕ್ಕೆ ಎಚ್ಚರಿಕೆ ನೀಡಿದರು. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಗುಲಾಮ್ ರಬ್ಬಾನಿಯನ್ನು ವಿಚಾರಣೆಗೆ ಒಳಪಡಿಸಿದಾಗ ಬಾಲಕನ ಕತ್ತರಿಸಿದ ದೇಹದ ತುಂಡುಗಳನ್ನು ಹೂತುಹಾಕಿದ್ದಾನೆ ತಪ್ರೊಪ್ಪಿಕೊಂಡಿದ್ದಾನೆ