Gl harusha
ಅಪರಾಧ

KSRTC ಬಸ್ ನಲ್ಲೇ ನೌಕರ ಆತ್ಮಹತ್ಯೆ!!

ಡ್ಯೂಟಿ ಬದಲಿಸಿದ್ದಕ್ಕೆ ಬಸ್ ನಲ್ಲಿಯೇ ಕೆಎಸ್‌ಆರ್ಟಿಸಿ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಡಿಪೋ 1ರ ಅಳ್ಳಾವರ ಬಸ್ ನಲ್ಲಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಬೆಳಗಾವಿ: ಡ್ಯೂಟಿ ಬದಲಿಸಿದ್ದಕ್ಕೆ ಬಸ್ ನಲ್ಲಿಯೇ ಕೆಎಸ್‌ಆರ್ಟಿಸಿ ನೌಕರ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಡಿಪೋ 1ರ ಅಳ್ಳಾವರ ಬಸ್ ನಲ್ಲಿ ನಡೆದಿದೆ.

Muliya
srk ladders
Pashupathi

ಬಸ್ ಒಳಗೆ ನೇಣು ಬಿಗಿದುಕೊಂಡು ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 57 ವರ್ಷದ ಕೇಶವ ಕಮಡೋಳಿ ಆತ್ಮಹತ್ಯೆ ಮಾಡಿಕೊಂಡರು.

ಬಸ್ ವಾಷಿಂಗ್ ಬದಲು ಪಂಕ್ಚರ್ ಕೆಲಸಕ್ಕೆ ಡ್ಯೂಟಿ ಬದಲಿಸಿದ್ದರು ಎಂದು ಅಧಿಕಾರಿಗಳ ವಿರುದ್ಧ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು ಶವ ತೆಗೆಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ್ದಾರೆ.

ಕೇಶವ ಅವರು ಬೆಳಗಾವಿಯ ಹಳೆ ಗಾಂಧಿನಗರ ನಿವಾಸಿಯಾಗಿದ್ದಾರೆ. ಬೆನ್ನು ನೋವು ಇದ್ದರೂ ಕೇಶವ ಅವರಿಗೆ ಡ್ಯೂಟಿ ಬದಲಿಸಲಾಗಿದೆ. ಡ್ಯೂಟಿ ಬದಲಾವಣೆ ಮಾಡದಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಹೀಗಿದ್ದರೂ ಡ್ಯೂಟಿ ಬದಲಾವಣೆ ಮಾಡಿದ್ದರು. ಕೆಲಸದ ಒತ್ತಡ ತಡೆದುಕೊಳ್ಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಸ್ಥಳಕ್ಕೆ ಬೆಳಗಾವಿ ಮಾರ್ಕೆಟ್ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

Related Posts

ಮಂಗಳೂರು – ಉಳ್ಳಾಲ ಬಸ್’ನಲ್ಲಿ ಯುವತಿಯ ಮುಟ್ಟಿ ವಿಕೃತಿ! ಬಸ್ ನಿರ್ವಾಹಕನ ಅಮಾನತುಗೊಳಿಸಿದ KSRTC ಡಿಸಿ!

ಕೆಎಸ್ಸಾರ್ಟಿಸಿ ಬಸ್ ನಿರ್ವಾಹಕನೊಬ್ಬನ ವಿರುದ್ಧ ಲೈಂಗಿಕ ಕಿರುಕುಳ, ದೌರ್ಜನ್ಯ ಪ್ರಕರಣ ದಾಖಲಾದ…