ಪುತ್ತೂರು: ಶುಕ್ರವಾರ ತೆರೆ ಕಂಡಿರುವ ಮಿಡ್ಲ್ ಕ್ಲಾಸ್ ಫ್ಯಾಮಿಲಿ ತುಳು ಸಿನಿಮಾ ತಂಡದಿಂದ ಸೋಮವಾರ ಸಂಜೆ ಕಲ್ಲೇಗದಿಂದ ದರ್ಬೆವರೆಗೆ ರೋಡ್ ಶೋ ನಡೆಸಲಾಯಿತು.
ಕಲ್ಲೇಗ ಕಲ್ಕುಡ ದೈವಸ್ಥಾನದಲ್ಲಿ ಪ್ರಾರ್ಥನೆ ನೆರವೇರಿಸಿ, ಬಳಿಕ ರೋಡ್ ಶೋಗೆ ಚಾಲನೆ ನೀಡಲಾಯಿತು.
ರೋಡ್ ಶೋಗೆ ಚಾಲನೆ ನೀಡಿ ಮಾತನಾಡಿದ ಉದ್ಯಮಿ ಸಹಜ್ ರೈ ಬಳಜ್ಜ, ಯುವ ಹಾಗೂ ತಂತ್ರಜ್ಞ ತಂಡದಿಂದ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ. ಈಗಾಗಲೇ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ಖಂಡಿತಾ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಿನಿಮಾ ನಿರ್ದೇಶಕ ರಾಹುಲ್ ಅಮೀನ್, ನಾಯಕ ನಟ ವಿನೀತ್ ಕುಮಾರ್, ನಾಯಕಿ ಸಮತಾ ಅಮೀನ್, ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಕಲ್ಲೇಗದಿಂದ ಹೊರಟ ರೋಡ್ ಶೋ ನಾಸಿಕ್ ಬ್ಯಾಂಡಿನ ಸದ್ದಿನೊಂದಿಗೆ ಪುತ್ತೂರು ಪೇಟೆಯಾದ್ಯಂತ ಸಾಗಿ, ದರ್ಬೆಯಲ್ಲಿ ಸಮಾಪನಗೊಂಡಿತು.