BREAKING

ಸಿನೇಮಾ

ಶಬರಿಮಲೆ ದೇವಸ್ಥಾನದಲ್ಲಿ ಭಕ್ತನ ಆತ್ಮಹತ್ಯೆ!!

ಶಬರಿಮಲೆಯಲ್ಲಿ ಕರ್ನಾಟಕದ ಭಕ್ತರೊಬ್ಬರು ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಶಬರಿಮಲೆಯಲ್ಲಿ ಕರ್ನಾಟಕದ  ಭಕ್ತರೊಬ್ಬರು ತುಪ್ಪದ ಅಭಿಷೇಕ ಕೌಂಟರ್‌ಗಳ ಮಂಟಪದಿಂದ ಹಾರಿ ಆತ್ಮಹತ್ಯೆಗೆ ಶರಣಾದ (suicide attempt) ಘಟನೆ ಸೋಮವಾರ ತಡರಾತ್ರಿ ನಡೆದಿದೆ ಎಂದು ವರದಿಯಿಂದ ತಿಳಿದು ಬಂದಿದೆ.

ಸಾವಿಗೀಡಾದ ಅಯ್ಯಪ್ಪ ಸ್ವಾಮಿಯ ಭಕ್ತ ಕರ್ನಾಟಕದ ಕನಕಪುರದ (Kanakapur) ನಿವಾಸಿ ಕುಮಾರಸ್ವಾಮಿ (40) ಎಂದು ತಿಳಿದು ಬಂದಿದೆ.

ಶಬರಿಮಲೆಯಲ್ಲಿ ಎಲ್ಲ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭಕ್ತನೋರ್ವ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಭಕ್ತ ಶಬರಿಮಲೆಯ ತುಪ್ಪದ ಅಭಿಷೇಕ ಕೌಂಟರ್ ಗಳ ಮಂಟಪದಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದಾಗ ಅಲ್ಲಿದ್ದವರು ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆ ಗೆ (local hospital) ಕರೆದೊಯ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಕುಮಾರ ಸ್ವಾಮಿ ಖಿನ್ನತೆಯಿಂದ

(depression) ಬಳಲುತ್ತಿದ್ದು, ಈ ಹಿನ್ನೆಲೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Posts