ಸಿನೇಮಾ

ತುಳು ಸಿನಿಮಾ ವೀಕ್ಷಿಸುವ ಮೂಲಕ ನಮ್ಮ ಕಲಾವಿದರನ್ನು ಪ್ರೋತ್ಸಾಹಿಸಿ | ನೆತ್ತೆರೆಕೆರೆ ತುಳು ಸಿನಿಮಾ ಉದ್ಘಾಟಿಸಿ ಅರುಣ್ ಕುಮಾರ್ ಪುತ್ತಿಲ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತುಳು ಸಿನಿಮಾಗಳನ್ನು ವೀಕ್ಷಿಸುವ ಮೂಲಕ ತುಳು ಚಿತ್ರಕ್ಕೆ ಪ್ರೋತ್ಸಾಹ ನೀಡುವ ಕೆಲಸ ಆಗಬೇಕಿದೆ. ಸ್ವರಾಜ್ ಶೆಟ್ಟಿ ಅವರ ಸಿನಿಮಾ ನೆತ್ತೆರೆಕೆರೆ ತೆರೆಕಂಡಿದ್ದು, ಇಂತಹ ಚಿತ್ರಗಳ ಮೂಲಕ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವ ಕೆಲಸ ಆಗಲಿ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹೇಳಿದರು.

akshaya college

ಅಸ್ತ್ರ ಪ್ರೊಡಕ್ಷನ್ ಲಾಂಛನದಲ್ಲಿ ನಿರ್ಮಾಣಗೊಂಡ ಸ್ವರಾಜ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ ನೆತ್ತೆರೆಕೆರೆ ತುಳು ಸಿನಿಮಾವನ್ನು ಶುಕ್ರವಾರ ಜಿಎಲ್ 1 ಮಾಲ್ ನಲ್ಲಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ತುಳು ಚಲನ ಚಿತ್ರಗಳ ಮೂಲಕ ತುಳು ಭಾಷೆ, ಸಂಸ್ಕೃತಿಯನ್ನು ಉಳಿಸುವ ಕಾರ್ಯ ಆಗುತ್ತಿದೆ. ಹೀಗಾಗಿ ತುಳು ಚಲನಚಿತ್ರಗಳಿಗೆ ಸಹಕಾರ, ಪ್ರೋತ್ಸಹ ನೀಡುವ ಕೆಲಸ ತುಂಬಾ ಆಗಬೇಕಿದೆ. ಸ್ವರಾಜ್ ಶೆಟ್ಟಿಯವರ ತುಳು ಚಿತ್ರ ಬಿಡುಗಡೆಗೊಳ್ಳುತ್ತಿದ್ದು ಉಡುಪಿ ಮತ್ತು ದ.ಕ ಜಿಲ್ಲೆಯ ತುಳುವರು ವೀಕ್ಷಣೆ ಮಾಡುವ ಮುಖಾಂತರ ಕಲಾವಿದರ ಭವಿಷ್ಯ ಉಜ್ವಲವಾಗಲಿದೆ. ತುಳುವಿನ ಮೇಲಿನ ಗೌರವದಿಂದ ಚಿತ್ರ ವೀಕ್ಷಣೆ ಮಾಡಿ ಇನ್ನಷ್ಟು ಮಂದಿಗೆ ಪ್ರೇರಣೆ ನೀಡಬೇಕು ಎಂದರು.

ಅಕ್ಷಯ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಜಯಂತ ನಡುಬೈಲು ಮಾತನಾಡಿ, ತುಳುವಿನಲ್ಲಿ ಹಲವು ಚಿತ್ರಗಳು ಬರುತ್ತಿದೆ. ನಮ್ಮದೇ ಊರಿನ ಕಲಾವಿದರು ಅಭಿನಯಿಸಿರುವ ಚಿತ್ರಗಳು ತುಳು ಚಿತ್ರ ತಂಡದಲ್ಲಿರುವುದು ನಮಗೆ ಹೆಮ್ಮೆ. ಈ ಚಿತ್ರವು ನೂರು ದಿನ ಪ್ರದರ್ಶನ ಕಂಡ ಚಿತ್ರಗಳ ಸಾಲಿಗೆ ಸೇರ್ಪಡೆಗೊಳ್ಳಲಿ ಎಂದು ಹಾರೈಸಿದರು.

ಉದ್ಯಮಿ ಸಹಜ್ ರೈ ಬಳೆಜ್ಜ ಮಾತನಾಡಿ, ತುಳುವಿನಲ್ಲಿ ಸಾಕಷ್ಟು ಹೊಸ ಹೊಸ ಚಿತ್ರಗಳ ನಿರ್ಮಾಣ ಅಗುತ್ತಿರುವುದು ತುಳು ಭಾಷೆಗೆ ಹೆಮ್ಮೆ. ಬಹಳಷ್ಟು ಕಲಾವಿದರು ಚಿತ್ರದಲ್ಲಿದ್ದು ಚಿತ್ರವನ್ನು ಗೆಲ್ಲಿಸುವ ಕೆಲಸ ಆಗಬೇಕು ಎಂದರು.

ಸಂಪ್ಯ ಉದಯಗಿರಿ ವಿಷ್ಣುಮೂರ್ತಿ ಒತ್ತೆಕೋಲ ಸಮಿತಿಯ ಗೌರವಾಧ್ಯಕ್ಷ ಮಂಜಪ್ಪ ರೈ ಬಾರಿಕೆ ಮಾತನಾಡಿ, ತುಳು ಚಲನಚಿತ್ರಗಳನ್ನು ಎಲ್ಲರೂ ವಿಕ್ಷಣೆ ಮಾಡುವ ಮೂಲಕ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು ಎಂದರು.

ರಾಷ್ಟ್ರಪ್ರಶಸ್ತಿ ವಿಜೇತ ಮುಖ್ಯಶಿಕ್ಷಕ ನಾರಾಯಣ ರೈ ಕುಕ್ಕುವಳ್ಳಿ, ಮೂಕಾಂಬಿಕ ಕಲ್ಚರಲ್ ಅಕಾಡೆಮಿಯ ನೃತ್ಯಗುರು ದೀಪಕ್ ಕುಮಾರ್, ದಯಾನಂದ ರೈ ಬೆಟ್ಟಂಪಾಡಿ ಶುಭಹಾರೈಸಿದರು.

ಸ್ಕೂಲ್ ಲೀಡರ್ ಸಿನಿಮಾದ ನಿರ್ದೇಶಕ ರಝಾಕ್, ಚಿತ್ರದ ನಟಿ ಭವ್ಯ ಪೂಜಾರಿ, ಭಾರತ್ ಸಿನೇಮಾಸ್ ವ್ಯವಸ್ಥಾಪಕ ಜಯರಾಮ ವಿಟ್ಲ ಉಪಸ್ಥಿತರಿದ್ದರು.

ಪದ್ಮರಾಜ್ ಪುತ್ತೂರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಚಲನಚಿತ್ರ ವಿತರಕ ಬಾಲಕೃಷ್ಣ ರೈ ಕುಕ್ಕಾಡಿ ವಂದಿಸಿದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಧರ್ಮದೈವಕ್ಕಿಂತ ವಿಭಿನ್ನ ಕಥಾಹಂದರದ ಧರ್ಮಚಾವಡಿ | ನಾಳೆ (ಜುಲೈ 11) ಉಭಯ ಜಿಲ್ಲೆಗಳಲ್ಲಿ ಬಿಡುಗಡೆ: ನಿತಿನ್ ರೈ ಕುಕ್ಕುವಳ್ಳಿ

ಪುತ್ತೂರು: ತುಳು ಸಿನಿರಂಗದಲ್ಲಿ ಸದ್ದು ಮಾಡಿದ ಧರ್ಮ ದೈವ ಸಿನಿಮಾದ ಬಳಿಕ ಇದೀಗ ಧರ್ಮ ಚಾವಡಿ…