ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಬೈಯ್ಯುವವರೇ ಹೆಚ್ಚು. ಆದರೆ ಇದೀಗ ಆತ್ಮಹತ್ಯೆಗೆ ಯಂತ್ರವನ್ನೇ ಆವಿಷ್ಕರಿಸಲಾಗಿದೆ. ಹೌದು, ಸ್ವಿಟ್ಜರ್ಲೆಂಡ್ ಇಂತಹ ಯಂತ್ರವೊಂದನ್ನು ಆವಿಷ್ಕರಿಸಿದೆ. ಈ ಯಂತ್ರದ ಸಹಾಯದಿಂದ ಒಂದೇ ನಿಮಿಷದಲ್ಲಿ ನೋವಿಲ್ಲದೇ ಸಾಯಬಹುದಂತೆ. ಶೀಘ್ರದಲ್ಲೇ ಇದು ಮಾರುಕಟ್ಟೆಗೆ ಬರುವ ಸಾಧ್ಯತೆ…
Browsing: ಟ್ರೆಂಡಿಂಗ್ ನ್ಯೂಸ್
6 ತಿಂಗಳು ಯುದ್ಧದಲ್ಲಿ ಭಾಗಿ, 21 ತಿಂಗಳು ವೈದ್ಯಕೀಯ ಉಪಚಾರ. ಒಟ್ಟು 27 ತಿಂಗಳು ಸೇನೆಯಲ್ಲಿ ನನ್ನ ಸೇವೆ. ಎಲ್ಲರೂ ಇದನ್ನು ದುರದೃಷ್ಟ ಅಂತ ಹೇಳ್ತಾರೆ. ಪರ್ಮನೆಂಟ್ ಕಮೀಷನ್ ಆಯ್ಕೆ ಮಾಡಿಕೊಂಡ ನಾನು, ಕೆಲವು ತಿಂಗಳುಗಳಷ್ಟೇ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಕಿತು ಎನ್ನುವುದು ಅವರ ವಾದ. ಆದರೆ ನನಗೆ ಹಾಗೇ ಅನ್ನಿಸಲೇ ಇಲ್ಲ. ಕಾರಣವೂ ಇದೆ. 1970ರ ಯುದ್ಧದ ಬಳಿಕ ಮತ್ತೊಂದು ಯುದ್ಧ ನಡೆದದ್ದು 1999ರಲ್ಲಿ. ಅದು ಕಾರ್ಗಿಲ್ ಯುದ್ಧ. ಇದೇ ಹೊತ್ತಿಗೆ ನಾನು ಸೇನೆಗೆ ಸೇರಿಕೊಂಡೆ. ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗುವ ಅವಕಾಶ ನನ್ನದಾಯಿತು. ಎಂತಾ ಅದೃಷ್ಟ ನೋಡಿ.
ಮೊದಲ ಸೀಸನ್’ನ ಯಶಸ್ವಿ ಪಯಣದೊಂದಿಗೆ, ಸಾವಿರಾರು ಸಂತೃಪ್ತ ಗ್ರಾಹಕರನ್ನು ಪಡೆದ “ಬ್ರೈಟ್ ಭಾರತ್” ಸಂಸ್ಥೆ ಇದೀಗ ಈ ಭಾಗದಲ್ಲಿ ಪ್ರಪ್ರಥಮ ಬಾರಿಗೆ, ಆರು ಸುಸಜ್ಜಿತ ಮನೆಯೊಂದಿಗೆ ನಾಲ್ಕು ಐಶಾರಾಮಿ ಕಾರು, ನಾಲ್ಕು ಸುಸಜ್ಜಿತ ಜಾಗ, ಚಿನ್ನ, ಡೈಮಂಡ್’ಗಳನ್ನು ಬಹುಮಾನವಾಗಿ ನೀಡುವ ಮತ್ತೊಂದು ಹೊಸ ಯೋಜನೆಯನ್ನು ಬಿಡುಗಡೆಗೊಳಿಸಿದೆ.
ಕರಾವಳಿ ಜಿಲ್ಲೆಯ ದೈವಗಳ ಕಾರಣಿಕ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ ಸಾವಿರಾರು ನಿದರ್ಶನ ನೀಡಬಹುದು. ಕಾಂತಾರ ಸಿನಿಮಾವೂ ಇದೇ ನೆಲೆಯಲ್ಲಿ ಹುಟ್ಟಿಕೊಂಡ ಚಿತ್ರ. ಇಲ್ಲಿ ಪೊಲೀಸ್ ಇಲಾಖೆ ತನಿಖೆ ಮಾಡುವ ಮೊದಲೇ ದೈವಗಳು ಅಪರಾಧಿಯನ್ನು ತಂದು ಭಕ್ತರ ಮುಂದೆ ಇಟ್ಟು ಕಾರಣೀಕವನ್ನು ತೋರಿದೆ ಎಂದರೆ ನೀವು ನಂಬಲೇಬೇಕು. ಇದಕ್ಕೆ ಸಾಕ್ಷಿ ಎನ್ನುವಂತೆ ಉಡುಪಿಯಲ್ಲಿ ಒಂದು ಘಟನೆ ನಡೆದಿದೆ. ದೇವರ ಕಾಣಿಕೆ ಹಣ ಕದ್ದು ಪರಾರಿಯಾಗಿದ್ದ ಕಳ್ಳ 24 ಗಂಟೆ ಒಳಗೆ ಸಿಕ್ಕಿಬಿದ್ದ ಘಟನೆ ನಡೆದಿದೆ.
ಅಪರೂಪದ ಮೆದುಳು ತಿನ್ನುವ ಅಮೀಬಾ ಸೋಂಕಿನ (Amoeba Infection) ಪ್ರಕರಣಗಳು ಹೆಚ್ಚಾಗುತ್ತಿದ್ದು ಕೇರಳದಲ್ಲಿ (Kerala) ಭಾರಿ ಆತಂಕ ಸೃಷ್ಟಿಯಾಗಿದೆ. ಕೇರಳದಲ್ಲಿ ಈವರೆಗೆ ನಾಲ್ಕು ಮಕ್ಕಳು ಈ ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ಕೇರಳದಲ್ಲಿ ಅಮೀಬಾ ಸೋಂಕು ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಟ್ಟೆಚ್ಚರವಹಿಸುವಂತೆ ಅಧಿಕಾರಿಗಳಿಗೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಅಮೀಬಾ ಸೋಂಕು ಲಕ್ಷಣ ಕಂಡು ಬಂದರೆ ಕೂಡಲೇ ಮಾಹಿತಿಗೆ ಸೂಚಿಸಲಾಗಿದೆ.
ನಾಗರ ಹಾವು ಕಡಿತಕ್ಕೊಳಗಾಗಿ ಮಹಿಳೆಯೋರ್ವರು ಮೃತಪಟ್ಟಿದ್ದರು. ಆಕೆಯ ಅಂತ್ಯಸಂಸ್ಕಾರದ ವಿಧಿಯ ಕೊನೆಯ ಭಾಗವಾದ ನೀರು ಇಡುವ ಕಾರ್ಯಕ್ರಮವೂ ನಡೆದಿತ್ತು. ವಿಸ್ಮಯವೆಂದರೆ, ಈ ಕಾರ್ಯಕ್ರಮಕ್ಕೆ ಆಗಮಿಸಿದ ಹಾವು ಪಾತ್ರದಲ್ಲಿದ್ದ ನೀರನ್ನು ಕುಡಿದು ತೆರಳಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಯಕ್ಷಗಾನದ ವಾದನ ಪರಿಕರಕ್ಕೆ ಮತ್ತು ವಾದನಕ್ಕೆ ಹೊಸ ಆಯಾಮವನ್ನು ತೋರಿದ ಪುತ್ತೂರು ಗೋಪಾಲಕೃಷ್ಣಯ್ಯ ಯಾ ಗೋಪಣ್ಣ ಇವರ ಸ್ಮೃತಿ ಕಾರ‍್ಯಕ್ರಮ ಜು. 3ರಂದು ಮಧ್ಯಾಹ್ನ 2ಕ್ಕೆ ಪುತ್ತೂರಿನ ಬಪ್ಪಳಿಗೆ ‘ಅಗ್ರಹಾರ’ ನಿವಾಸದಲ್ಲಿ ನಡೆಯಲಿದೆ.
ರಾಜ್ಯದ ಉತ್ತರ ಕರ್ನಾಟಕ ಹಾಗೂ ಅರೆ ಮಲೆನಾಡಿನ ಕೆಲವೆಡೆ ಮತ್ತು ಬಳ್ಳಾರಿ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮೆಣಸನ್ನು ಒಂದು ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಾರೆ. ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಕರಾವಳಿಯಂತೆ ಮಳೆ ಬಾರದ ಕಾರಣ ಉತ್ತರ…
ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಪಹರಣ ಆರೋಪದಡಿ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದರೆ ಏನಾಗುತ್ತಿತ್ತು. ಹೀಗೊಂದು ಪ್ರಶ್ನೆ ಎಲ್ಲರ ತಲೆಯಲ್ಲೂ…
ಸರಕಾರಿ ಶಾಲೆಗಳೆಂದರೆ ಅಲ್ಲಿ ಸಕಲ ವ್ಯವಸ್ಥೆಗಳಿರುವುದಿಲ್ಲ, ಇಂಗ್ಲಿಷ್ ಕಲಿಕೆಗೆ ಕಷ್ಟವಾಗುತ್ತದೆ, ಪ್ರಾಧ್ಯಾಪಕರ ಕೊರತೆಯಂತೂ ಇದ್ದೇ ಇರುತ್ತದೆ. ಹೀಗೆ ಹೆಚ್ಚಿನವರಿಗೆ ಸರಕಾರಿ ಶಾಲೆಗಳ ಬಗ್ಗೆ ಒಂದಷ್ಟು ಪೂರ್ವಾಗ್ರಹಗಳು ಇರುತ್ತವೆ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ…