ಗಡಿಯಲ್ಲಿ ಹೋರಾಡುವುದಕ್ಕಿಂತಲೂ ಬಲು ಘೋರ, ದೇಶದೊಳಗಿನ ಶತ್ರುಗಳ ವಿರುದ್ಧದ ಹೋರಾಟ. ವಿರೋಧಿ ದೇಶದ, ಉಗ್ರ ಬಣಗಳು ದೇಶದೊಳಗಡೆ ವಿಧ್ವಂಸಕ ಕೃತ್ಯ ಎಸಗಲು ದೇಶದೊಳಗಿರುವ ತಮ್ಮ ಜನರನ್ನೇ ಬಳಸಿಕೊಳ್ಳುತ್ತಾರೆ. ಅವರ ಮೂಲಕ ತಮ್ಮ ಕೆಲಸ ಸಾಧಿಸಿಕೊಳ್ಳುತ್ತಾರೆ. ಇಂತಹ ದುಷ್ಟರನ್ನು ಮಟ್ಟ ಹಾಕಲು ಸೈನ್ಯದೊಳಗಿನ…
ಮಂಗಳೂರು: ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರಿಗೆ ಮಂಗಳೂರಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅಭಿನಂದನಾ ಪ್ರಶಸ್ತಿ ಪತ್ರ ನೀಡಿ, ಸನ್ಮಾನಿಸಲಾಯಿತು.
ಧರ್ಮಸ್ಥಳ ಗ್ರಾಮದ ಬೊಳಿಯಾರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಇಳಿದ ಕಾಡಾನೆ ವಾಹನಗಳನ್ನು ಜಖಂಗೊಳಿಸಿದ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ.
ಪುತ್ತೂರು: ಸ್ವಾತಂತ್ರ್ಯ ಪಡೆದ ಈ 77 ವರ್ಷಗಳಲ್ಲಿ ಭಾರತ ಅನೇಕ ಮೈಲಿಗಲ್ಲುಗಳನ್ನು ಕ್ರಮಿಸಿದೆ. ಇನ್ನಷ್ಟು ಹೊಸ ಸಾಧನೆಗಳ ಪಥ ನಮ್ಮ ಮುಂದಿದೆ ಎಂದು ಮಾಸ್ಟರ್ ಪ್ಲಾನರಿ ಮಾಲಕ ಆನಂದ್ ಕುಮಾರ್ ಎಸ್.ಕೆ. ಹೇಳಿದರು.
ಪುತ್ತೂರು : ಬಿಜೆಪಿ ಪುತ್ತೂರು ನಗರ ಮಂಡಲ ಹಾಗೂ ಗ್ರಾಮಾಂತರ ಮಂಡಲ (Puttur BJP) ಅಧ್ಯಕ್ಷ ಸ್ಥಾನ ಘೋಷಣೆಯಾಗಿದೆ.
ಭಾರತದ 78ನೇ ಸ್ವಾತಂತ್ರ್ಯ ದಿನಾಚರಣೆಯ (Independence Day) ಮನ್ನಾದಿನವಾದ ಇಂದು (ಬುಧವಾರ) ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ.
ಅಯೋಧ್ಯೆಯ ಬಾಲರಾಮನ ಮೂರ್ತಿ ಕೆತ್ತನೆ ಮಾಡಿರುವ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ಗೆ ಅಮೆರಿಕ ವೀಸಾ ನಿರಾಕರಿಸಿದೆ.
ಪುತ್ತೂರು: ಪೊಲೀಸ್ ವರಿಷ್ಠಾಧಿಕಾರಿ (ಎಸ್.ಪಿ.) ಕಚೇರಿ ಮಂಗಳೂರಿನಿಂದ ಪುತ್ತೂರಿಗೆ ವರ್ಗ ಆಗಬೇಕು ಎನ್ನುವುದು ಬಹುದಿನಗಳ ಬೇಡಿಕೆ. ಈ ವಿಚಾರ ಅಲ್ಲಿ- ಇಲ್ಲಿ ಚರ್ಚೆ ಆಗುವುದು ಬಿಟ್ಟರೆ, ವರ್ಗಾವಣೆಯಂತೂ ಆಗಿಯೇ ಇಲ್ಲ. ಇದೀಗ ಮತ್ತೊಮ್ಮೆ ಈ ಚರ್ಚೆ ಮುನ್ನೆಲೆಗೆ ಬಂದಿದೆ.
ತ್ರಿವರ್ಣ ಧ್ವಜವನ್ನು ಕೈಯಲ್ಲಿ ಹಿಡಿದುಕೊಂಡ ವಿದ್ಯಾರ್ಥಿಗಳು 'ವಂದೇ ಮಾತರಂ' ಮತ್ತು 'ಭಾರತ್ ಮಾತಾ ಕೀ ಜೈ' ಘೋಷಣೆಗಳನ್ನು ಕೂಗಿದರು. ಅವರು ಜಮ್ಮು ಮತ್ತು ಕಾಶ್ಮೀರದ ರಿಯಾಸಿಯ ಚೆನಾಬ್ ನದಿಯ ಮೇಲಿನ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆಯ ಮೇಲೆ ರ‍್ಯಾಲಿ ನಡೆಸಿದರು.
ಮುಂಬೈಯ ಕಸ್ಟಮ್ ಅಧಿಕಾರಿಗಳ ಹೆಸರಿನಲ್ಲಿ ವೈದ್ಯರೊಬ್ಬರಿಗೆ ಕೋಟ್ಯಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Welcome, Login to your account.
Welcome, Create your new account
A password will be e-mailed to you.