ನಿಧನ

ಮಾಜಿ ಸಚಿವ ಸುರೇಶ್ ಕಲ್ಮಾಡಿ ನಿಧನ!

ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಸುರೇಶ್ ಕಲ್ಮಾಡಿ ಅವರು ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಸುರೇಶ್ ಕಲ್ಮಾಡಿ…

ನಿವೃತ್ತ ಶಿಕ್ಷಕಿ ಮಾಲಿನಿ ಪಾಂಗಳಾಯಿ ನಿಧನ!

ಪುತ್ತೂರು: ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ, ಆದಾಯ ತೆರಿಗೆ ಇಲಾಖೆಯ ನಿವೃತ್ತ ಇನ್ಸ್‍'ಪೆಕ್ಟರ್ ಸೇಸಪ್ಪ ಬಂಗೇರ ಅವರ ಪತ್ನಿ ನಿವೃತ್ತ ಶಿಕ್ಷಕಿ ಮಾಲಿನಿ ಪಾಂಗಳಾಯಿ (77 ವ) ಅವರು ಅಸೌಖ್ಯದಿಂದ ಶುಕ್ರವಾರ ಸಂಜೆ ಪುತ್ತೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಪುತ್ತೂರು ತಾಲೂಕಿನ ವಿವಿಧ ಶಾಲೆಗಳಲ್ಲಿ…

ಇಲಿ ಪಾಷಾಣ ಸೇವಿಸಿ ಮೇಘರಾಜ್ ಮೃತ್ಯು!

ಸವಣೂರು: ಸವಣೂರು ಗ್ರಾಮದಲ್ಲಿ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸವಣೂರು ಗ್ರಾಮದ ಅಗರಿ ನಿವಾಸಿ ರಾಮಚಂದ್ರ ಅವರ ಪುತ್ರ ಮೇಘರಾಜ್ ಮೃತ ಯುವಕ. ಡಿಸೆಂಬರ್ 25ರಂದು ಮನೆಯಲ್ಲಿ ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದರು. ಅವರನ್ನು ಚಿಕಿತ್ಸೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ…

ಬ್ರಹ್ಮವಾಹಕ ಸುಕುಮಾರ್ ಪುರೋಹಿತ್ ನಿಧನ!!

ಮಂಗಳೂರು, ಮೂಡುಬಿದರೆ ಸೇರಿದಂತೆ ಹಲವು ದೇವಸ್ಥಾನಗಳಲ್ಲಿ ಬ್ರಹ್ಮವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಪುರೋಹಿತ್ ಸುಕುಮಾರ್ (42 ವ.) ಅವರು ಭಾನುವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು. ಶಿರ್ವ ಕುತ್ಯಾರು ನಿವಾಸಿಯಾಗಿರುವ ಇವರು, ಕರಾವಳಿಯ ಹಲವು ಕಡೆಗಳಲ್ಲಿ ಪುರೋಹಿತ ವೃತ್ತಿ ನಡೆಸುತ್ತಿದ್ದರು.…

ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ನಿತೇಶ್‌ ಗೆ ಮಾತೃ ವಿಯೋಗ!

ಪುತ್ತೂರು: ನೆಲಪ್ಪಲ ಪಡ್ಡಾಯೂರ್ ನಿವಾಸಿ ಮಾಲಾ (62 ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಡಿ. 25ರಂದು ಬೆಳಿಗ್ಗೆ ನಿಧನರಾದರು. ಮೃತರು ಪತಿ ವಸಂತ ನಾೖಕ್‌ ಮಕ್ಕಳಾದ ಪ್ರೀತೀಶ್, ಬಿಜೆಪಿ ಯುವ ಮೋರ್ಚಾ ನಗರ ಮಂಡಲ ಅಧ್ಯಕ್ಷ ನೀತೇಶ್ ಮತ್ತು ಶಾರೀಶ್ ಅವರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 4…

ಶಿಶಿಲ: ಹಾವು ಕಚ್ಚಿ ಮಹಿಳೆ ಸಾವು! ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಶೌರ್ಯ ವಿಪತ್ತು ನಿರ್ವಹಣಾ…

ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಮಹಿಳೆಯೋರ್ವರಿಗೆ ಹಾವು ಕಚ್ಚಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಶಿಶಿಲ ಗ್ರಾಮದ ಗುಡ್ಡೆ ತೋಟ ನಿವಾಸಿ ಪ್ರೇಮ (55) ಮೃತರು. ಭಾನುವಾರ ಮಧ್ಯಾಹ್ನದ ವೇಳೆ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ನಾಗರಹಾವು ಕಡಿದಿದೆ. ತಕ್ಷಣ ಅವರನ್ನು ಶೌರ್ಯ…

ಸಿವಿಲ್ ಇಂಜಿನಿಯರ್ ಅರುಣ್ ಬಿ.ವಿ. ಹೃದಯಾಘಾತದಿಂದ ನಿಧನ!

ಪುತ್ತೂರು: ತಾಲೂಕು ನಿವೃತ್ತ ಪತ್ರಾಂಕಿತ ಖಜಾನಾಧಿಕಾರಿ ವಿಠಲ ಆಚಾರಿ ಅವರ ಪುತ್ರ, ಮುಂಡೂರು ನಿವಾಸಿ, ಸಿವಿಲ್ ಇಂಜಿನೀಯರ್ ಅರುಣ್ (51 ವ.) ಅವರು ಹೃದಯಾಘಾತದಿಂದ ಶುಕ್ರವಾರ ಸಂಜೆ ನಿಧನರಾದರು. ಮೂಲತಃ ಬನ್ನೂರು ಮೇಲ್ಮಜಲು ನಿವಾಸಿಯಾಗಿರುವ ಇವರು, ಮುಂಡೂರಿನಲ್ಲಿ ವಾಸವಾಗಿದ್ದಾರೆ. ಶುಕ್ರವಾರ ಸಂಜೆ…

ಖಾದಿ ಗ್ರಾಮೋದ್ಯೋಗದ ಸದಾಶಿವ ಆಚಾರ್ಯ ನಿಧನ!

ಬಂಟ್ವಾಳ: ಖಾದಿ ಗ್ರಾಮೋದ್ಯೋಗದಲ್ಲಿ 65 ವರ್ಷಗಳ ಕಾಲ ಸೇವೆ ಸಲ್ಲಿದ್ದ ಸದಾಶಿವ ಆಚಾರ್ಯ (94 ವ.) ಅಲ್ಪ ಕಾಲದ ಅಸೌಖ್ಯದಿಂದ ಬಂಟ್ವಾಳ ಭಂಡಾರಿ ಬೆಟ್ಟುವಿನಲ್ಲಿರುವ ಮನೆಯಲ್ಲಿ ಡಿ. 16ರಂದು ರಾತ್ರಿ ನಿಧನ ಹೊಂದಿದರು. ಮಂಗಳೂರಿನ ಖಾದಿ ಗ್ರಾಮದ್ಯೋಗದಲ್ಲಿ 65 ವರ್ಷಗಳ ಕಾಲ ಪ್ರಾಮಾಣಿಕ ನೌಕರನಾಗಿ ದುಡಿದು,…

ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ನಿಧನ!!

ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ(94) ನಿಧನರಾಗಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. 6 ಬಾರಿ ಶಾಸಕರಾಗಿದ್ದಂತ ಶಾಮನೂರು ಶಿವಶಂಕರಪ್ಪ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಉಸಿರಾಟದ ಸಮಸ್ಯೆಯಿಂದ ಅವರು…

ತೆಂಗಿನಕಾಯಿ ಕೀಳುವಾಗ ಹೃದಯಾಘಾತ: ಮರದಲ್ಲಿ ನೇತಾಡುತ್ತಿದ್ದ ವ್ಯಕ್ತಿಯನ್ನು ಕಂಡು ಪೊಲೀಸರಿಗೆ ಮಾಹಿತಿ…

ತೆಂಗಿನಕಾಯಿ ಕೀಳಲು ಏರಿದ ವ್ಯಕ್ತಿಯೊಬ್ಬರು ಮರದಲ್ಲೇ ಮೃತಪಟ್ಟ ಘಟನೆ ಕಟೀಲು ಜಲಕದ ಕಟ್ಟೆ ಸಮೀಪ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಜಯರಾಮ ಶೆಟ್ಟಿ(75) ಎಂದು ಗುರುತಿಸಲಾಗಿದೆ. ಸುರತ್ಕಲ್‌ನ ಮುಕ್ಕದಲ್ಲಿ ವಾಸವಾಗಿರುವ ಜಯರಾಮ ಶೆಟ್ಟಿಯವರು ಬುಧವಾರ ಕಟೀಲು ಸಮೀಪದ ತಮ್ಮ ಜಮೀನಿನಲ್ಲಿರುವ ತೆಂಗಿನಮರಕ್ಕೆ…