ಅಪರಾಧ

ಬಂಟ್ವಾಳ: ದ್ವಿಚಕ್ರ ವಾಹನ ಡಿಕ್ಕಿ, ರಸ್ತೆ ಬದಿ ನಿಂತಿದ್ದ ಮಹಿಳೆ ಮೃತ್ಯು!!

ರಸ್ತೆ ದಾಟಲು ನಿಂತಿದ್ದ ಮಹಿಳೆಯೋರ್ವರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕು ಬಿ-ಮೂಡ ಗ್ರಾಮದ ಮಿತ್ತಬೈಲು ಜುಮ್ಮಾ ಮಸೀದಿ ಎದುರು ನಡೆದಿದೆ.

ಪುತ್ತೂರು: ಟ್ರಾನ್ಸ್‌ಪೋರ್ಟ್ ಮಾಲಕನ ಅಪಹರಣ: ಲಕ್ಷಾಂತರ ರೂ. ದರೋಡೆ

ದಕ್ಷಿಣ ಕನ್ನಡ ಜಿಲ್ಲೆಯ ಟ್ರಾನ್ಸ್‌ಪೋರ್ಟ್ ಮಾಲಕನೋರ್ವನನ್ನು ಅಡ್ಡಗಟ್ಟಿದ ಗರುಡ ಗ್ಯಾಂಗ್‌, ಅವರನ್ನು ಅಪಹರಣ ಮಾಡಿ 29 ಲಕ್ಷ ರೂ.ಗಳಿಗೂ ಹೆಚ್ಚು ಹಣ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಟೈಮ್ಸ್ ಆಫ್ ಕುಡ್ಲ  ಪತ್ರಿಕೆ ಸಂಪಾದಕ ಶಶಿ ಆರ್.ಬಂಡಿಮಾ‌ರ್ ಹೃದಯಾಘಾತದಿಂದ ನಿಧನ!!

ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ಸಂಸ್ಥಾಪಕರು, ಶಶಿ ಬಂಡಿಮಾರ್ ರವರು ನಾಗಾಲ್ಯಾಂಡ್ ನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಮಂಗಳೂರಿಗೆ ಬರುತ್ತಿದ್ದ ಬಸ್  ತಡೆದು ಹಲ್ಲೆ !!

ಖಾಸಗಿ ಬಸ್ಸನ್ನು ವ್ಯಕ್ತಿಯೊಬ್ಬ ಅಡ್ಡಗಟ್ಟಿ ಗಾಜು ಒಡೆದು ಹಾಕಿ ದಾಂಧಲೆ ಎಸಗಿ ಪ್ರಯಾಣಿಕರನ್ನು ಭೀತಿಗೊಳಪಡಿಸಿದ ಘಟನೆ ಇಂದು ನಸುಕಿನ ಹೊತ್ತು ಹಾಸನದ ಬಳಿ ಸಂಭವಿಸಿದೆ.

ಮತ್ತೊಂದು ಬ್ಯಾಂಕ್ ದರೋಡೆ!! ಹಣಕ್ಕೆ ಕನ್ನ ಹಾಕಿದ ಖದೀಮರು, ಎಟಿಎಂನ ಹೊತ್ತೊಯ್ದರು!!

ಹಣ ಕದಿಯಲು ಬಂದ ಚೋರರು ಎಟಿಎಂ‌ ಮಷಿನ್ ಅನ್ನೇ ಹೊತ್ತೊಯ್ದಿರುವ ಘಟನೆ ಹಾಸನ‌ ಜಿಲ್ಲೆಯ ಹನಮಂತಪುರ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಮಹಿಳೆ ಸಾಯುತ್ತಿದ್ದರೆ ವೈದ್ಯೆ ರೀಲ್ಸ್ ನೋಡುತ್ತಿದ್ದಳು!

ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅತ್ತ ವೈದ್ಯರು ಮೊಬೈಲ್ನಲ್ಲಿ ರೀಲ್ಸ್ ನೋಡುತ್ತಾ ಕುಳಿತಿದ್ದರು, ಇತ್ತ ಮಹಿಳಾ ರೋಗಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.

ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರಿನಲ್ಲಿ 1ಕೋಟಿಗಿಂತಲೂ ಅಧಿಕ ಹಣ!!

ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರೊಂದರಲ್ಲಿ 1ಕೋಟಿ 15 ಲಕ್ಷ ಹಣ ದೊರೆತಿದ್ದು ಅದನ್ನು ಅಂಕೋಲಾ ಪೊಲೀಸರು ವಶಕ್ಕೆ ಪಡೆದ ಘಟನೆ ಜ.28ರ ಮಂಗಳವಾರ ಸಂಜೆ ನಡೆದಿದೆ.

ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ

ಸರಿಗಮಪ ಸಂಗೀತ ಕಾರ್ಯಕ್ರಮದಲ್ಲಿ ಹಾಡುತ್ತಿದ್ದ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಡಿ.ವಿ.ಹಳ್ಳಿ ಗ್ರಾಮದ ಅಂಧ ಸಹೋದರಿಯರಾದ ಮಂಜಮ್ಮ ಮತ್ತು ರತ್ನಮ್ಮ ತಮ್ಮ ಹಾಡುಗಳಿಂದಲೇ ಖ್ಯಾತಿ ಗಳಿಸಿದ್ದರು. ಇದೀಗ ಮಂಜಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.