ಅಪರಾಧ

ಮಂಗಳೂರು:ಭೀಕರ ರಸ್ತೆ ಅಪಘಾತ; ಇಬ್ಬರು ವಿದ್ಯಾರ್ಥಿಗಳ ಸಾವು!

ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಬಳಿ ಮಂಗಳವಾರ ಮುಂಜಾನೆ 2.50ರ ವೇಳೆ ನಡೆದ ರಸ್ತೆ ಅಪಘಾತದಲ್ಲಿ ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದಾನೆ.

BJP ನಾಯಕ ಮನೋರಂಜನ್ ಕಾಲಿಯಾ ನಿವಾಸದ ಬಳಿ  ಭಾರೀ ಸ್ಫೋಟ!!

ಪಂಜಾಬ್‌ : ಪಂಜಾಬ್ ರಾಜ್ಯದ ಜಲಂಧರ್‌ನ ಬಿಜೆಪಿ ನಾಯಕ ಮನೋರಂಜನ್ ಕಾಲಿಯಾ ಅವರ ನಿವಾಸದ ಹೊರಗೆ ಭಾರೀ ಸ್ಪೋಟ ಸಂಭವಿಸಿದ್ದು, ಆಂತಕ ಸೃಷ್ಟಿಸಿದೆ. ಇಂದು ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸ್ಫೋಟ ಸಂಭವಿಸಿದ್ದು, ಭಾರೀ ಸ್ಫೋಟಕ್ಕೆ ಗಾಢ ನಿದ್ರೆಯಲ್ಲಿದ್ದ ಜನರು ಬೆಚ್ಚಿ ಬಿದ್ದಿದ್ದಾರೆ. ಸುದ್ದಿ…

ದೇವಸ್ಥಾನದಲ್ಲಿ ಹೆಜ್ಜೇನು ಕಡಿತ – 25 ಮಂದಿ ಆಸ್ಪತ್ರೆಗೆ ದಾಖಲು!

ಶ್ರೀರಾಮ ನವಮಿ ಪ್ರಯುಕ್ತ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಭಕ್ತಾದಿಗಳು, ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಹೆಜ್ಜೇನು ದಾಳಿ ನಡೆದ ಘಟನೆ ಚಿಕ್ಕಬಳ್ಳಾಪುರದ ರಂಗಸ್ಥಳ ದೇಗುಲದಲ್ಲಿ ನಡೆದಿದೆ.

ನಟಿ ಸಂಜನಾಗೆ ವಂಚನೆ – ಅಪರಾಧಿಗೆ 61.50 ಲಕ್ಷ ದಂಡ, 6 ತಿಂಗಳು ಜೈಲು!!

ನಟಿ ಸಂಜನಾ ಗಲ್ರಾನಿ ಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿ ರಾಹುಲ್ ತೋನ್ಸೆಗೆ ಎಂಬಾತನನ್ನು ಬೆಂಗಳೂರಿನ ನ್ಯಾಯಾಲಯ 61.50 ಲಕ್ಷ ರೂ. ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

ಕೊಡಿಪ್ಪಾಡಿ: ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾ‌ರ್ ಪತ್ತೆ!

ಶನಿವಾರ ಸಂಜೆ ಕೊಡಿಪ್ಪಾಡಿ ಮನೆಯಿಂದ ಇನ್ನು ಹುಡುಕಬೇಡಿ ಎಂದು ಹೇಳಿ ನಾಪತ್ತೆಯಾಗಿದ್ದ ವಿದ್ಯಾರ್ಥಿ ಮೊಹಮ್ಮದ್ ಹಸೈನಾರ್ ಭಾನುವಾರ ಅರಸೀಕೆರೆಯಲ್ಲಿ ಪತ್ತೆಯಾಗಿದ್ದಾನೆ.

ಶಿವಮೊಗ್ಗ:ನಾಪತ್ತೆಯಾಗಿದ್ದ 5 ಮಕ್ಕಳು ಪತ್ತೆ!!

ಶಿವಮೊಗ್ಗ: ಭದ್ರಾವತಿ ತಾಲ್ಲೂಕಿನ ತಳ್ಳಿಕಟ್ಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮರಿ ನಾರಾಯಣಪುರ ಐವರು ಮಕ್ಕಳು ಭಾನುವಾರ(ಏ.6) ಸಂಜೆಯಿಂದ ನಾಪತ್ತೆಯಾಗಿದ್ದು ಇಡೀ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು ಧನಂಜಯ್ (14), ಲೋಹಿತ್ (12), ಲಕ್ಷ್ಮೀಶ (9), ಚರಣ್‌ರಾಜ್ (9), ಭುವನ್ (8)…

ವಿಷ ಸೇವಿಸಿ ಆತ್ಮಹತ್ಯೆ; ಮಗ ಸಾವು, ತಾಯಿ ಗಂಭೀರ!

ಸುಬ್ರಹ್ಮಣ್ಯ: ಇಲಿ ಪಾಷಾಣ ಸೇವಿಸಿ ಅಮ್ಮ ಮತ್ತು ಮಹಾತ್ಮೆಗೆ ಯತ್ನಿಸಿದ್ದು, ಘಟನೆಯಲ್ಲಿ ಮಗ ಸಾವನ್ನಪ್ಪಿ ತಾಯಿ ಗಂಭೀರ ಸ್ಥಿತಿಯಲ್ಲಿ ಸುಳ್ಯದ ಆಸ್ಪತ್ರೆಗೆ ದಾಖಲಾದ ಘಟನೆ ಸುಳ್ಯ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ನಾಲ್ಕೂರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರನ್ನು…

ಪುತ್ತೂರು: ಆಟೋ ಚಾಲಕನಿಂದ ಅತ್ಯಾಚಾರ ಫೋಕ್ಸೋ ಪ್ರಕರಣ ದಾಖಲು!!

ಆಟೋ ಚಾಲಕನೊಬ್ಬ ಪಿಯುಸಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವೆಸಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆಟೋ ಚಾಲಕ ಮಂಜುನಾಥ್ ಕಟ್ಟತ್ತಡ್ಕ ಅತ್ಯಾಚಾರ ಎಸಗಿದ ಆರೋಪಿಯಾಗಿದ್ದು ಕಳೆದ ಆಗಸ್ಟ್ ತಿಂಗಳಲ್ಲಿ ಯುವತಿ ಒಬ್ಬಳೇ ಇದ್ದ ಸಂದರ್ಭನೀರು ಕೇಳುವ ನೆಪದಲ್ಲಿ ಬಂದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

2 ಲಕ್ಷ ಲಂಚ; ಕೃಷಿ ಅಧಿಕಾರಿ ಲೋಕಾಯುಕ್ತ ಬಲೆಗೆ!!

ಗುತ್ತಿಗೆದಾರರೊಬ್ಬರಿಂದ ಬರೋಬ್ಬರಿ 2 ಲಕ್ಷ ರೂ. ಲಂಚದ ಹಣ ಸ್ವೀಕರಿಸುವ ವೇಳೆ ಜಿಲ್ಲಾ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಕೃಷಿ ಅಧಿಕಾರಿಯೊಬ್ಬರನ್ನು ಬಂಧಿಸುವ ಘಟನೆ ನಗರದ ಹೊರ ವಲಯದ ಜಂಟಿ ಕೃಷಿ ನಿರ್ದೇಶಕರ ಕಚೇರಿ ಬಳಿ ಎ.5ರ ಶನಿವಾರ ಮಧ್ಯಾಹ್ನ ನಡೆದಿದೆ