Gl jewellers

ಅಪರಾಧ

ಮಕ್ಕಳಾಗದ ಮಹಿಳೆಗೆ ಗರ್ಭ ಧರಿಸುವಂತೆ ಮಾಡುವ ಉದ್ಯೋಗ!! ಹೀಗೊಂದು ವಿಚಿತ್ರ ಉದ್ಯೋಗದ ಜಾಹೀರಾತು: ಬೆಂಬಿದ್ದ…

ಮಕ್ಕಳಾಗದ ಮಹಿಳೆ ಗರ್ಭ ಧರಿಸಿದ್ರೆ ಬರೋಬ್ಬರಿ 5 ಲಕ್ಷ ರೂಪಾಯಿ ನೀಡಲಾಗುತ್ತದೆ ಎಂದು ಜಾಹೀರಾತು ಒಂದು ಸುದ್ದಿ ಮಾಡ್ತಿದೆ.

ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ ಬಂಧನ.!!

ಇತ್ತೀಚಿನ ದಿನಗಳಲ್ಲಿ ದೆಹಲಿಯ ಹಲವಾರು ಶಾಲೆಗಳಿಗೆ ಇ ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬರುತ್ತಿದ್ದು ದೆಹಲಿ ಪೋಲೀಸರ ನಿದ್ದೆಗೆಡಿಸಿದೆ ಈ ನಡುವೆ ಬಾಂಬ್ ಬೆದರಿಕೆ ಸಂಬಂಧ ಕಾರ್ಯಾಚರಣೆ ನಡೆಸಿದ ಪೊಲೀಸರು ಹನ್ನೆರಡನೇ ತರಗತಿಯ ವಿದ್ಯಾರ್ಥಿಯೋರ್ವನನ್ನು ಬಂಧಿಸಿದ್ದಾರೆ.

ಮಂಗಳೂರಿನಲ್ಲಿ  ಬಾಂಗ್ಲಾದೇಶ ಪ್ರಜೆಯ ಬಂಧನ.!!

ರಾಜ್ಯ ಆಂತರಿಕ ಭದ್ರತಾ ವಿಭಾಗ ಮತ್ತು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಮುಕ್ಕ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶದ ಪ್ರಜೆಯನ್ನು ಬಂಧಿಸಿದ್ದಾರೆ.

ಹೆಮ್ಮೆಟ್‌ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್

ಬೈಕ್ ನಲ್ಲಿ ಸಂಚರಿಸುವಾಗ ಹೆಲ್ಮಟ್ ಧರಿಸದಿದ್ದರೆ ದಂಡ ವಿಧಿಸುವುದು ಕೇಳಿದ್ದೇವೆ ಆದರೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಹೆಲ್ಮಟ್ ಧರಿಸಿಲ್ಲ ಎಂದು ದಂಡ ವಿಧಿಸಿದ್ದು ಎಂದಾದರೂ ಕೇಳಿದ್ದೀರಾ...? ಮಧ್ಯಪ್ರದೇಶದ ಪನ್ನಾ ಜಿಲ್ಲೆಯ ಅಜಯ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂತಹ ಒಂದು ವಿಚಿತ್ರ ಘಟನೆ…

ಜಾಹೀರಾತಿಗೆ ಮರುಳಾಗಿ 58 ಲಕ್ಷ ಕಳೆದುಕೊಂಡ ಮಂಗಳೂರಿಗ!

ಹಳೆಯ ನಾಣ್ಯಗಳ ಖರೀದಿ ನೆಪದಲ್ಲಿ ಮಂಗಳೂರಿನ ವ್ಯಕ್ತಿಯೊಬ್ಬರಿಗೆ 58 ಲಕ್ಷ ರೂ. ವಂಚಿಸಿದ ಘಟನೆ ಮಂಗಳೂರು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿನ್ನೆಲೆ ಗಾಯಕ ಪಿ. ಜಯಚಂದ್ರನ್ ನಿಧನ

ಆರು ದಶಕಗಳ ಕಾಲ ಕೇರಳದ ಮಲಯಾಳಿ ಮನಸ್ಸುಗಳಿಗೆ ಮಧುರವಾದ ಹೃದಯಸ್ಪರ್ಶಿ ಗೀತೆಗಳನ್ನು ಉಣಿಸಿ ಭಾವಗಾಯಕನೆಂದೇ ಜನಮಾನಸದಲ್ಲಿ ಮನೆಮಾತಾಗಿದ್ದ ಪಿ.ಜಯಚಂದ್ರನ್ ವಿಧಿವಶರಾದರು. ತ್ರಿಶೂರು ಅಮಲಾ ಆಸ್ಪತ್ರೆಯಲ್ಲಿ ಜ.9ರಂದು ರಾತ್ರಿ ನಿಧನರಾದರು.ಅರ್ಬುದ ಭಾದಿತರಾಗಿ ಸುದೀರ್ಘ ದಿನಗಳಿಂದ ಅವರು…

ನರಿಮೊಗರು: ಪಿಯುಸಿ ವಿದ್ಯಾರ್ಥಿನಿ ದೀಕ್ಷಿತಾ ಆತ್ಮಹತ್ಯೆ

ನರಿಮೊಗರು ಕೂಡುರಸ್ತೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.9ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.

20 ವರ್ಷಗಳಿಂದ ಪಾಳುಬಿದ್ದ ಮನೆಯ ಫ್ರಿಡ್ಜ್‌ನಲ್ಲಿ ಮಾನವನ ತಲೆಬುರುಡೆ, ಮೂಳೆಗಳು ಪತ್ತೆ!

ಕಳೆದ 20 ವರ್ಷಗಳಿಂದ ಪಾಳುಬಿದ್ದಿದ್ದ ಮನೆಯೊಂದರ ಪ್ರಿಡ್ಜ್ ನಲ್ಲಿ ಮಾನವ ತಲೆಬುರುಡೆ ಮತ್ತು ಅಸ್ಥಿಪಂಜರ ಪತ್ತೆಯಾಗಿರುವ ಘಟನೆ ಕೇರಳದಲ್ಲಿ ನಡೆದಿದೆ. ಸದ್ಯ ಚೊಟ್ಟನಿಕ್ಕಾರ ಪೊಲೀಸರು ಕೊಲೆ ಶಂಕೆ ವ್ಯಕ್ತಪಡಿಸಿದ್ದು ತನಿಖೆ ಆರಂಭಿಸಿದ್ದಾರೆ.

ಒಂದೇ ಮನೆಯಲ್ಲಿ ರಕ್ತಸಿಕ್ತ ಮೂರು ಮೃತದೇಹಗಳು ಪತ್ತೆ..! ಮಚ್ಚಿನಿಂದ ಕೊಚ್ಚಿ ಕೊಂದ ಪತಿ| ಪೊಲೀಸರಿಗೆ ಶರಣಾದ…

ಕುಟುಂಬ ಕಲಹ ಕಾರಣಕ್ಕೆ ಪತ್ನಿ ಪೊಲೀಸ್  ಠಾಣೆಗೆ ದೂರು ನೀಡಿದ್ದಳು ಎಂದು ಪತ್ನಿ ಸೇರಿದಂತೆ ಮೂವರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಾಲಹಳ್ಳಿ ಕ್ರಾಸ್ ಬಳಿ ನಡೆದಿದೆ.

ಮೂವರು ಯುವಕರು ನೀರುಪಾಲು; ಓರ್ವನ ರಕ್ಷಣೆ

ಕುಳಾಯಿ ಜೆಟ್ಟಿ ಬಳಿಯ ಸಮುದ್ರ ತೀರದಲ್ಲಿ ಈಜಲು ಸಮುದ್ರಕ್ಕೆ ಇಳಿದಿದ್ದ ನಾಲ್ವರು ಯುವಕರ ಪೈಕಿ ಮೂವರು ನೀರುಪಾಲಾಗಿದ್ದು, ಓರ್ವನನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ ಘಟನೆ ಬುಧವಾರ ನಡೆದಿದೆ