ಅಪರಾಧ

ಮದ್ಯಪಾನವೆಂದು ವಿಷ ಸೇವನೆ!

ಹೆಬ್ರಿ: ಮದ್ಯಪಾನ ಎಂದು ಭಾವಿಸಿ ವಿಷ ಪದಾರ್ಥ ಸೇವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಮುದ್ರಾಡಿ ಗ್ರಾಮದ ಬಲ್ಲಾಡಿ ಈಶ್ವರನಗರದಲ್ಲಿ ನಡೆದಿದೆ. ಮೃತರನ್ನು ಸ್ಥಳೀಯ ನಿವಾಸಿ ತಮ್ಮು ಪೂಜಾರಿ (78) ಎಂದು ಗುರುತಿಸಲಾಗಿದೆ. ಇವರು ನ. 20ರಂದು ಮನೆಯಲ್ಲಿದ್ದ ವಾಹನದ ಬ್ರೇಕ್ ಪ್ಯೂಡ್ ಆಯಿಲ್‌ ಅನ್ನು…

ಗಾಂಜಾ ಸೇವನೆ ಪ್ರಕರಣ – ಕುದ್ರೋಳಿ ಗ್ರೀನ್ ಪಾರ್ಕ್ ಬಳಿ ವ್ಯಕ್ತಿ ಬಂಧನ!

ಮಂಗಳೂರು: ಕುದ್ರೋಳಿ ಗ್ರೀನ್ ಪಾರ್ಕ್‌ ಬಳಿ ಅನುಮಾನಾಸ್ಪದವಾಗಿ ತೂರಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂದರು ಅನ್ಸಾರಿ ರೋಡ್ ನಿವಾಸಿ ಮಹಮ್ಮದ್ ಹನೀಫ್ (42) ಬಂಧಿತ ವ್ಯಕ್ತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಗಸ್ತು ಕರ್ತವ್ಯದಲ್ಲಿದ್ದ ಬಂದರು ಠಾಣೆ ಪೊಲೀಸರು…

ಕೆಟ್ಟು ಹೋದ ವಾಹನದಲ್ಲಿದ್ದ ಗೋವುಗಳ ಪತ್ತೆ ಪ್ರಕರಣ: ಇಬ್ಬರ ಬಂಧನ!

ಪುತ್ತೂರು: ಗೋವುಗಳನ್ನು ಸಾಗಿಸುವ ವೇಳೆ ವಾಹನ ಕೆಟ್ಟು ಹೋಗಿದ್ದ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಸಜಿಪನಡು ನಿವಾಸಿಗಳಾದ  ಆಶಿಕ್ ಪಾಷಾ (26) ಹಾಗೂ ಅಬ್ದುಲ್‌ ಲತೀಫ್ (25) ಬಂಧಿತರು. ನ. 29ರಂದು ವಾಹನವೊಂದರಲ್ಲಿ ಗೋವುಗಳನ್ನು ಸಾಗಿಸುತ್ತಿದ್ದು, ನರಿಮೊಗರು…

ಇರಾ: ಮದುವೆ ಮನೆಯನ್ನೇ ಟಾರ್ಗೆಟ್ ಮಾಡಿ ಕಳ್ಳತನ!!

ಬಂಟ್ವಾಳ: ಮದುವೆ ಮನೆಗಳನ್ನೇ ಟಾರ್ಗೆಟ್ ಮಾಡಿ ಮನೆಯಲ್ಲಿ ಯಾರನ್ನೋ ನಿಲ್ಲಿಸಿ ಹೋದವರನ್ನು ಯಾಮಾರಿಸಿ ಸುಳ್ಳು ಹೇಳಿ ಕಳ್ಳತನ ಮಾಡುವ ಕೃತ್ಯಗಳು ಹೆಚ್ಚಾಗುತ್ತಿದೆ. ರವಿವಾರ ಬಂಟ್ವಾಳದ ಇರಾ ಗ್ರಾಮವೊಂದರ ಮನೆಗೆ ಇದೇ ರೀತಿಯಲ್ಲಿ ನುಗ್ಗಿ ನಗ-ನಗದು ದೋಚಿರುವ ಘಟನೆ ನಡೆದಿದೆ. ಇರಾ ಗ್ರಾಮದ ಕುರಿಯಾಡಿ ಪದ್ಮನಾಭ…

ಪಡೀಲ್ ಚಿಕನ್ ಸೆಂಟರಿನ ಬದ್ರುದ್ದೀನ್ ನಾಪತ್ತೆ!

ಪುತ್ತೂರು: ನಗರದ ಪಡೀಲ್ ನ ಚಿಕನ್ ಸೆಂಟರೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಬಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬದ್ರುದ್ದೀನ್ ಡಿಕೆ (27) ಕಾಣೆಯಾದ ಯುವಕ. ಈತ ಸುಮಾರು 8 ವರ್ಷಗಳಿಂದ ಅಬ್ದುಲ್ ರಹಿಮಾನ್ ಮಾಲಕತ್ವದ ಝಿಂದಗೀ ಚಿಕನ್ ಸೆಂಟರ್ ನಲ್ಲಿ ಕೆಲಸ…

ಆನ್’ಲೈನ್ ವಂಚನೆಗೆ ಹೊಂಚು: ಪುತ್ತೂರಿನ ಉದ್ಯಮಿಗೆ ಬಂದ ವಾಟ್ಸ್’ಆ್ಯಪ್ ಸಂದೇಶ!

ಪುತ್ತೂರು: ಸಂಚಾರ ನಿಯಮ ಉಲ್ಲಂಘಿಸಿದ್ದೀರಿ ಎಂಬ ಬರಹ ಹೊತ್ತ ಸಂದೇಶ ನಿಮ್ಮ ವಾಟ್ಸ್‍’ಆ್ಯಪ್’ಗೆ ಬಂದರೆ ತಲೆಕೆಡಿಸಿಕೊಳ್ಳಬೇಡಿ. ಯಾಕೆಂದರೆ ಇದು ವಂಚನೆಗೆ ಹಾಕಿರುವ ಹೊಂಚು. ಪುತ್ತೂರಿನ ಉದ್ಯಮಿಯೋರ್ವರಿಗೆ ಇಂತಹ ಸಂದೇಶ ವಾಟ್ಸ್’ಆ್ಯಪ್’ಗೆ ಬಂದು ಬಿದ್ದಿದೆ. ಏನಿದು ಎಂದು ಸಂದೇಶ ಓದುತ್ತಿರಬೇಕಾದರೆ, APK…

ಮಂಗಳೂರು: ಗ್ರಾ.ಪಂ. ಆವರಣದಲ್ಲಿ ಮಗಳಿಂದ ತಾಯಿಗೆ ಹಲ್ಲೆ!! ವೀಡಿಯೋ ಶೇರ್ ಬಗ್ಗೆ ಕಾನೂನು ಕ್ರಮದ ಎಚ್ಚರಿಕೆ…

ಮಂಗಳೂರು: ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಗ್ರಾಮ ಪಂಚಾಯತ್ ಆವರಣದಲ್ಲಿ ಮಗಳೇ ತನ್ನ ತಾಯಿಗೆ ಮನಬಂದಂತೆ ಥಳಿಸಿ, ಚಪ್ಪಲಿಯಿಂದ ಹೊಡೆದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮೂಡುಶೆಡ್ಡೆಯ…

ಇಎನ್‌ಟಿ ಕ್ಲಿನಿಕ್‌ನಲ್ಲಿ ಸಿಬ್ಬಂದಿಗೆ ಹಲ್ಲೆ – ಪೀಠೋಪಕರಣಕ್ಕೆ ಹಾನಿ: ಪುತ್ತಿಲ ಭೇಟಿ!

ಪುತ್ತೂರು ಮುಖ್ಯರಸ್ತೆ ದರ್ಬೆ ಗಣೇಶ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಇಎನ್‌ಟಿ ಕ್ಲಿನಿಕ್‌ನಲ್ಲಿ ಸಿಬ್ಬಂದಿಯ ಮೇಲೆ ವ್ಯಕ್ತಿಯೋರ್ವರು ಹಲ್ಲೆ ನಡೆಸಿ, ಕ್ಲಿನಿಕ್‌ನ ಪೀಠೋಪಕರಣಗಳಿಗೆ ಹಾನಿ ಉಂಟು ಮಾಡಿದ ಘಟನೆ ಶುಕ್ರವಾರ (ನ.29) ಬೆಳಗ್ಗೆ ನಡೆದಿದೆ. ಕ್ಲಿನಿಕ್‌ನಲ್ಲಿ ಪ್ರತಿದಿನ ಬೆಳಗ್ಗೆ…

ಅರಂತೋಡು: ಗುಂಡೇಟಿಗೆ ಕಡವೆ ಬಲಿ!

ಸುಳ್ಯ: ಪೆರಾಜೆ-ನಿಡ್ಯಮಲೆ ರಸ್ತೆಯ ಪಾನತ್ತಿಲದ ರಸ್ತೆ ಬದಿಯಲ್ಲಿ ಕಡವೆಯ ಮೃತದೇಹವೊಂದು ಪತ್ತೆಯಾಗಿದೆ. . ನವೆಂಬರ್ 27ರ ರಾತ್ರಿ ಬೇಟೆಗಾರರು ಕಡವೆಗೆ ಗುಂಡು ಹಾರಿಸಿದ್ದಾರೆ. ಇದರಿಂದ ಅದು ರಸ್ತೆ ಬದಿ ಬಂದು ಬಿದ್ದಿದೆ ಎಂದು ಶಂಕಿಸಲಾಗಿದೆ. ಸಂಪಾಜೆ ಅರಣ್ಯ ಇಲಾಖೆಯ ಅಧಿಕಾರಿಗಳು ಸತ್ತ ಕಡವೆಯನ್ನು ವಶಕ್ಕೆ…

ಶಿರಾಡಿ: ಟೆಂಪೊ ಪಲ್ಟಿ – ಬಸ್‌ಗೆ ಡಿಕ್ಕಿ

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ಪರಿಸರದ ಕೆಂಪಳ್ಳ ಬಳಿ ಚಾಲಕನ ನಿಯಂತ್ರಣ ತಪ್ಪಿ ಸರಕು ಸಾಗಿಸುತ್ತಿದ್ದ ಟೆಂಪೊ ಪಲ್ಟಿಯಾಗಿ, ಹೆದ್ದಾರಿಯ ಇನ್ನೊಂದು ಬದಿಯಲ್ಲಿ ಬರುತ್ತಿದ್ದ ಖಾಸಗಿ ಬಸ್ಸಿಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ನಡೆದಿದೆ. ಅಪಘಾತದಲ್ಲಿ ಟೆಂಪೊ ಚಾಲಕ ಗಾಯಗೊಂಡಿದ್ದು,…