ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಮುಡಾದಿಂದ ಪಡೆದಿದ್ದ 14 ನಿವೇಶನಗಳನ್ನು ವಾಪಸ್ ಮಾಡಿದ ಬೆನ್ನಲ್ಲೆ ಇದೀಗ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುಟುಂಬಕ್ಕೆ ಸೇರಿದ ಸಿದ್ಧಾರ್ಥ ವಿಹಾರ ಟ್ರಸ್ಟ್‌ಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ( KIADB)ನಿಂದ ಪಡೆದಿದ್ದ 5 ಎಕರೆ ಜಮೀನನ್ನು ವಾಪಸ್ ಮಾಡಲು ಖರ್ಗೆ ಕುಟುಂಬ ನಿರ್ಧಾರಿಸಿದೆ.
Browsing: All News
Your blog category
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಗಳಾದ ಪರಶುರಾಮ್ ವಾಘ್ಮೋರೆ ಮತ್ತು ಮನೋಹರ್ ಯಡವೆಗೆ ವಿಶೇಷ ನ್ಯಾಯಾಲಯ ಅಕ್ಟೋಬರ್ 9ರಂದು ಜಾಮೀನು ನೀಡಿದ್ದು ಜೈಲಿನಿಂದ ಹೊರಬಂದ ಆರೋಪಿಗಳಿಗೆ ಹಿಂದೂಪರ ಸಂಘಟನೆಗಳು ಸನ್ಮಾನಿಸಿದೆ.
ಕಾರ್ಕಳ ತಾಲೂಕು ಕಚೇರಿ ಜಂಕ್ಷನ್ ಬಳಿ ಬೈಪಾಸ್ ರಸ್ತೆಯಲ್ಲಿಯಿರುವ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್‌ನಲ್ಲಿ ಕಾರಿಗೆ ಟ್ಯಾಂಕ್ ತುಂಬ ಪೆಟ್ರೋಲ್ ತುಂಬಿಸಿ ಹಣ ಕೊಡದೆ ಪರಾರಿಯಾಗಿದ್ದ ಅಸಾಮಿಯನ್ನು ಪತ್ತೆಹಚ್ಚುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಪುತ್ತೂರು: 33 ಕೆ.ವಿ. ಕಾವು- ಸುಳ್ಯ ವಿದ್ಯುತ್ ಮಾರ್ಗದಲ್ಲಿ ಅ. 15 (ಮಂಗಳವಾರ) ರ ಬೆಳಿಗ್ಗೆ 9:30 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ನಿಲುಗಡೆ ನಡೆಯಲಿದೆ.
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಚರಿಸಲಾಗುತ್ತಿರುವ “ಮಂಗಳೂರು ದಸರಾ’ ಸಂಭ್ರಮದ ಬೃಹತ್ ಶೋಭಾಯಾತ್ರೆ ಅ.13ರಂದು ಸಂಜೆ 4 ಗಂಟೆಗೆ ಆರಂಭವಾಗಿ ಅ.14ರ ಮುಂಜಾನೆ ಶಾರದೆಯ ಜಲಸ್ತಂಭನದ ಮೂಲಕ ಸಮಾಪನಗೊಳ್ಳಲಿದೆ.
ಮೈಸೂರಿನಲ್ಲಿ ವಿಶ್ವವಿಖ್ಯಾತ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು.
ಬೆಡ್ ಶೀಟ್ ಮತ್ತು ಲುಂಗಿಯ ನೆರವಿನಿಂದ 20 ಅಡಿಯ ಜೈಲು ಗೋಡೆಯನ್ನು ಏರಿ ಐದು ಮಂದಿ ಪೋಕ್ಸೋ ವಿಚಾರಣಾಧೀನ ಕೈದಿಗಳು ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಪುತ್ತೂರು: ಸಹಜ್ ರೈ ಬಳೆಜ್ಜ ನೇತೃತ್ವದ ವಿಜಯ ಸಾಮ್ರಾಟ್ ಪುತ್ತೂರು ಇದರ ಆಶ್ರಯದಲ್ಲಿ ಪುತ್ತೂರುದ ಪಿಲಿಗೊಬ್ಬು ಸೀಸನ್-2 ಕಾರ್ಯಕ್ರಮದ ಹುಲಿಕುಣಿತ ವೇಷ ಸ್ಪರ್ಧೆ ಅ.6ರಂದು ಅದ್ದೂರಿಯಾಗಿ ನಡೆಯಿತು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಉದ್ಯಮಿ ರವಿ ಶೆಟ್ಟಿ ಮೂಡಂಬೈಲು ಪಿಲಿಗೊಬ್ಬು ಸ್ಪರ್ಧಾ ಕಾರ್ಯಕ್ರಮದ ವೇದಿಕೆಯನ್ನು ಹಿಂಗಾರ ಅರಳಿಸಿ ಹುಲಿವೇಷ ಕುಣಿತ ಸ್ಪರ್ಧೆಗೆ ಚಾಲನೆ ನೀಡಿದರು.
ಪುತ್ತೂರು: ‘ಪಿಲಿಗೊಬ್ಬು’ ಕೇವಲ ಮನರಂಜನೆಯ ಆಟವಾಗಿರದೆ ಧಾರ್ಮಿಕ ನೆಲೆಗಟ್ಟನ್ನು ಹೊಂದಿದೆ. ತುಳುನಾಡಿನ ಪ್ರತಿ ಜನಪದೀಯ ಚಟುವಟಿಕೆಗಳಿಗೂ ಧಾರ್ಮಿಕ ಹಿನ್ನಲೆ ಇದೆ. ಕಂಬಳ, ಕೋಳಿ ಅಂಕ, ಯಕ್ಷಗಾನ ಹಾಗೂ ಹುಲಿ ಕುಣಿತ ಎಲ್ಲದಕ್ಕೂ ಧಾರ್ಮಿಕ ಸ್ಪರ್ಶವನ್ನು ಹಿರಿಯರು ನೀಡಿದ್ದಾರೆ. ಕೋಳಿ ಅಂಕ ಕೂಡ ನಿಷಿದ್ಧ ಅಲ್ಲ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು.
ಪುತ್ತೂರು: ನವರಾತ್ರಿಯ ದಿನಗಳಲ್ಲಿ ವಿಶೇಷವಾಗಿ ಆರಾಧಿಸಲ್ಪಡುವ ದುರ್ಗೆಯ ವಾಹನ ಹುಲಿಯ ಕುಣಿತವನ್ನು ಸ್ಪರ್ಧೆಯ ರೂಪದಲ್ಲಿ ಪ್ರದರ್ಶಿಸುವ ಈ ವೇದಿಕೆ ಅತ್ಯಾಪೂರ್ವವಾದದ್ದು. ತುಳುನಾಡಿನ ಜನಪದ ಕ್ರೀಡೆಯ ಪ್ರದರ್ಶನಕ್ಕೆಪುತ್ತೂರಿನಲ್ಲಿ ವೇದಿಕೆ ಕಲ್ಪಿಸಿಕೊಟ್ಟ ಕೀರ್ತಿ ವಿಜಯ ಸಾಮ್ರಾಟ್ ತಂಡಕ್ಕೆ ಸಲ್ಲುತ್ತದೆ. ಪಿಲಿಗೊಬ್ಬು 1ನ್ನು ಮೀರಿದ ಯಶಸ್ಸು ಜನಸ್ಪಂದನೆ ಸೀಸನ್ 2ಕ್ಕೆ ಸಿಗಲಿ. ಆ ಮೂಲಕ ಈ ಆಯೋಜನೆ ಹತ್ತೂರಿಗೂ ಮಾದರಿಯಾಗಬೇಕು. ಇಂತಹದೊಂದು ಅಭೂತಪೂರ್ವ ಕಾರ್ಯಕ್ರಮವನ್ನು ಆಯೋಜಿಸಿದ ಸಹಜ್ ಮತ್ತು ಬಳಗದ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಉದ್ಯಮಿ ಉಜ್ವಲ್ ಪ್ರಭು ಹೇಳಿದರು.