Friday, November 22
Share News

ಪುತ್ತೂರು: ಕಳೆದ 48 ವರ್ಷಗಳಿಂದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಾ ಬಂದಿರುವ ಶ್ರೀ ಭಗವತೀ ಸಹಕಾರ ಬ್ಯಾಂಕ್‌ನ ಪುತ್ತೂರು ಶಾಖೆ ಮಾ.28ರಂದು ಪುತ್ತೂರು ಏಳ್ಳುಡಿಯಲ್ಲಿರುವ ಮಹಾದೇವಿ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಮಾಧವ ಬಿ.ಎಮ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

1977ರಲ್ಲಿ ಶ್ರೀ ಭಗವತೀ ಶ್ರೇಯೋಭಿವೃದ್ಧಿ ಸಹಕಾರ ಸಂಘ ನೋಂದಣಿ ಮಾಡಿಕೊಂಡು 1984ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್‌ನ ಕಾನೂನು ಪ್ರಕಾರ ಶ್ರೀ ಭಗವತೀ ಶ್ರೇಯೋಭಿವೃದ್ಧಿ ಸಹಕಾರ ಸಂಘವು ಒಂದು ಬ್ಯಾಂಕ್ ಆಗಿ ಪರಿವರ್ತನೆಗೊಂಡಿತ್ತು. ನಂತರದ ಬೆಳವಣಿಗೆಯಲ್ಲಿ ಬ್ಯಾಂಕಿನ ಶಾಖೆಗಳು ವಿಸ್ತರಣೆಗೊಂಡು 2ಸಾವಿರ ಇಸವಿಯಲ್ಲಿ ವಿಟ್ಲದಲ್ಲಿ 7ನೇ ಶಾಖೆಯನ್ನು ಇದೀಗ ಪುತ್ತೂರನಲ್ಲಿ 8ನೇ ಶಾಖೆಯನ್ನು ಆರಂಭಿಸಲಾಗುತ್ತಿದೆ. ನೂತನ ಬ್ಯಾಂಕ್‌ನ ಉದ್ಘಾಟನೆ ಕಾರ್ಯಕ್ರಮ ನಿಶ್ಚಯ ಮಾಡಿ ಆಮಂತ್ರಣ ಪತ್ರ ನೀಡುವ ಸಂದರ್ಭದಲ್ಲಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಇರಲಿಲ್ಲ. ಹಾಗಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದೆವು. ಬಳಿಕದ ಬೆಳವಣಿಗೆಯಲ್ಲಿ ನೀತಿ ಸಂಹಿತೆ ಬಂದಿರುವ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಿಗೆ ಭಾಗವಹಿಸಲು ಅನಾನುಕೂಲ ಆಗಿದೆ. ಈ ನಿಟ್ಟಿನಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ವಾಮನ್ ಪೈ, ಉದ್ಯಮಿ ಕಿಶೋರ್ ಕುಮಾರ್, ವಕೀಲರಾದ ಪಾಝೀಲ್, ಪಿ.ಕೆ.ಸತೀಶನ್, ಸುದಾನ ವಸತಿಯುತ ಶಾಲೆಯ ಸಂಚಾಲಕ ರೇ ವಿಜಯ ಹಾರ್ವೀನ್, ಉಳ್ಳಾಲದ ಚಂದ್ರಹಾಸ ಸಹಿತ ಹಲವಾರು ಮಂದಿ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದವರು ಹೇಳಿದರು.

ಶ್ರೀ ಭಗವತೀ ಸಹಕಾರ ಬ್ಯಾಂಕ್ ಎಲ್ಲಾ ವರ್ಷಗಳಲ್ಲಿ ಲಾಭ ಗಳಿಸುತ್ತಾ ಬಂದಿದ್ದು, 2024ಲ್ಲಿ ಪಸ್ತುತ 29,840 ಮಂದಿ ಸದಸ್ಯರಿದ್ದು, ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಯಲ್ಲಿ ಬ್ಯಾಂಕ ಅನ್ನು 2ನೇ ಟಯರ್‌ನಲ್ಲಿ ವರ್ಗೀಕರಿಸಲಾಗಿದೆ ಮಾತ್ರವಲ್ಲ ಉತ್ತಮ ಆರ್ಥಕ ಸಂಸ್ಥೆ ಎಂದು ಪರಿಗಣಿಸಲಾಗಿದೆ ಎಂದು ಮಾಧವ ಬಿ.ಎಮ್ ಹೇಳಿದರು.

ಬ್ಯಾಂಕಿನಲ್ಲಿ ಇರುವ ಠೇವಣಿಗಳಿಗೆ ಶೇ. 3ರಿಂದ 8.60 ಬಡ್ಡಿ ನೀಡಲಾಗುತ್ತದೆ. ಹಿರಿಯ ನಾಗರಿಕರಿಗೆ 0.5 % ಅಧಿಕ ಬಡ್ಡಿ ನೀಡಲಾಗುತ್ತದೆ. ಮಹಿಳೆಯರಿಗೆ 3 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಠೇವಣಿಗಳಿಗೆ ಕೂಡ 0.5 % ಅಧಿಕ ಬಡ್ಡಿ ನೀಡಲಾಗುತ್ತದೆ. ಪಾಲು ಬಂಡವಾಳಕ್ಕೆ ಬ್ಯಾಂಕಿನ ಲಾಭದಲ್ಲಿ ಡಿವಿಡೆಂಡ್ ನೀಡಲಾಗುತ್ತದೆ. ಗೃಹ ಸಾಲ, ಅಡವು ಸಾಲ, ವಾಹನ ಸಾಲ, ಚಿನ್ನಾಭರಣ ಅಡವು ಸಾಲ ಹಾಗು ಸಂಬಳದ ಆಧಾರದಲ್ಲಿ ಸಾಲಗಳನ್ನು ಶೀಘ್ರವಾಗಿ ನೀಡಲಾಗುತ್ತದೆ. ಗ್ರಾಹಕರಿಗೆ ಸನ್ಮಾನ, ವಿದ್ಯಾರ್ಥಿವೇತನ ಸಹಿತ ಇತರ ಸೌಲಭ್ಯಗಳನ್ನು ಬ್ಯಾಂಕ್‌ನಿಂದ ನೀಡಲಾಗುವುದು ಎಂದು ಮಾಧವ ಬಿ.ಎಮ್ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕ್‌ನ ಉಪಾಧ್ಯಕ್ಷ ದೇವದಾಸ್‌ ಕೊಲ್ಯ, ಪ್ರಧಾನ ವ್ಯವಸ್ಥಾಪಕಿ ಸುಷ್ಮಾ ರಾಜೇಶ್, ನಿರ್ದೇಶಕ ಕಿರಣ್, ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ರಾಘವ, ಪುತ್ತೂರು ನೂತನ ಶಾಖೆಯ ಮೆನೇಜ‌ರ್ ರಮೇಶ್ ಉಪಸ್ಥಿತರಿದ್ದರು.


Share News

Comments are closed.

Exit mobile version