ಭುವನೇಶ್ವರ್: ಗೂಡ್ಸ್ ರೈಲೊಂದು ಹಳಿ ತಪ್ಪಿ ಪಕ್ಕದಲ್ಲಿದ್ದ ಜನವಸತಿ ಪ್ರದೇಶಕ್ಕೆ ನುಗ್ಗಿದ ಘಟನೆ ಒಡಿಶಾದ ರೂರ್ಕೆಲಾದಲ್ಲಿ ಬುಧವಾರ ಬೆಳಗ್ಗೆ ಸಂಭವಿಸಿದೆ.
ಬೆಳಗಿನ ಜಾವಾ ಅವಘಡ ಸಂಭವಿಸಿದ್ದು ಪರಿಣಾಮ ಗೂಡ್ಸ್ ರೈಲಿನ ಮೂರೂ ಬೋಗಿಗಳು ಹಳಿ ತಪ್ಪಿ ಬಸಂತಿ ಕಾಲೋನಿಗೆ ನುಗ್ಗಿದೆ ಜೋರಾದ ಸದ್ದು ಕೇಳುತ್ತಿದ್ದಂತೆ ಕಾಲೋನಿಯ ಕೆಲ ನಿವಾಸಿಗಳು ಭಯಭೀತರಾಗಿ ಓಡಿದ್ದಾರೆ. ಘಟನೆಯಿಂದ ಯಾವುದೇ ಕಾಲೋನಿಯಲ್ಲಿದ್ದ ಯಾವುದೇ ಮನೆಗಳಿಗೆ ಡಿಕ್ಕಿ ಹೊಡೆಯದ ಪರಿಣಾಮ ದೊಡ್ಡ ಅನಾಹುತ ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಅಪಘಾತದಿಂದ ರೈಲಿನ ಮೂರೂ ಬೋಗಿಗಳು ಬಸಂತಿ ಕಾಲೋನಿಯ ರಸ್ತೆ ಮದ್ಯದಲ್ಲಿ ನಿಂತ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿದೆ. ಘಟನಾ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ಹಾಗೂ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿ. ಕೆಲ ಸಮಯದ ಬಳಿಕ ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.