All News

ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ  ವೃದ್ಧನ ರಕ್ಷಣೆ!!

ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿ ಯೋರ್ವರನ್ನು ರಕ್ಷಿಸಲಾದ ಘಟನೆ  ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಬಳಿ ನಡೆದಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಸುಬ್ರಹ್ಮಣ್ಯ: ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವ್ಯಕ್ತಿ ಯೋರ್ವರನ್ನು ರಕ್ಷಿಸಲಾದ ಘಟನೆ  ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಬಳಿ ನಡೆದಿದೆ.

ಬೆಂಗಳೂರಿನಿಂದ ಒಂಟಿಯಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದ್ದ ವೃದ್ಧರೋರ್ವರು ಸ್ನಾನಘಟ್ಟದ ಬಳಿ ನೀರಿಗೆ ಇಳಿದು ಬಳಿಕ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗುತ್ತಿರುವುದನ್ನು ಗಮನಿಸಿದ ಸ್ಥಳದಲ್ಲಿದ್ದವರು ದೇವಳದ ಸಿಬ್ಬಂದಿ ಲೋಕಾನಾಥ್‌ ಅವರಿಗೆ ಮಾಹಿತಿ ನೀಡಿದ್ದರು. ತತ್‌ಕ್ಷಣ ಅಲ್ಲಿಗೆ ಆಗಮಿಸಿದ ಲೋಕನಾಥ್‌ ಅವರು ಅಲ್ಲಿ ಅಂಗಡಿ ನಡೆಸುತ್ತಿರುವ ಗೋಪಾಲ್‌ ಹಾಗೂ ಇನ್ನೋರ್ವರ ಸಹಕಾರದಲ್ಲಿ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ವೃದ್ಧರನ್ನು ನೀರಿನಿಂದ ಹೊರಕ್ಕೆ ಕರೆತಂದು, ಪ್ರಥಮ ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.

SRK Ladders

ವೃದ್ಧರು ಮನೆಯವರ ಸ್ಪಷ್ಟ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಲಾಯಿತು. ರಕ್ಷಣೆ ವೇಳೆ ವೃದ್ಧ ವ್ಯಕ್ತಿ ನನ್ನನ್ನು ಯಾಕೆ ರಕ್ಷಿಸಿದ್ದೀರಿ, ನಾನು ಸಾಯಬೇಕು ಎಂದು ಹೇಳುತ್ತಿದ್ದರು. ಮನಸ್ಸಿಗೆ ಏನೋ ಬೇಜಾರಾಗಿ ಮನೆಯನ್ನು ಬಿಟ್ಟು ಒಂಟಿಯಾಗಿ ಬಂದಿದ್ದರು ಎಂದು ತಿಳಿದುಬಂದಿದೆ.


ಈ ಸುದ್ದಿಯನ್ನು ಶೇರ್ ಮಾಡಿ

Related Posts