ಪ್ರಚಲಿತ

ಮೇ 7ರಂದು ಶೃಂಗೇರಿ ಜಗದ್ಗುರುಗಳಿಗೆ ಸಾರ್ವಜನಿಕ ಗುರುವಂದನೆ | ತೆಂಕಿಲದ ಸ್ವಾಮಿ ಕಲಾಮಂದಿರದಲ್ಲಿ ಆಹ್ವಾನ ಪತ್ರಿಕೆ ಲೋಕಾರ್ಪಣೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಬಪ್ಪಳಿಗೆಯ ಶ್ರೀ ಶಂಕರ ಸಭಾಭವನದಲ್ಲಿ ಮೇ 7ರಂದು ನಡೆಯಲಿರುವ ಶೃಂಗೇರಿ ಜಗದ್ಗುರುಗಳಾದ ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಸಾರ್ವಜನಿಕ ಗುರುವಂದನಾ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ತೆಂಕಿಲದ ಸ್ವಾಮಿ ಕಲಾ ಮಂದಿರದಲ್ಲಿ ಮಂಗಳವಾರ ಲೋಕಾರ್ಪಣೆಗೊಳಿಸಲಾಯಿತು. ಗುರುವಂದನಾ ಸಮಿತಿ ಹಾಗೂ ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜನೆಗೊಳ್ಳಲಿದೆ.

chennai-shopping
maithri

ಈ ಸಂದರ್ಭದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಗುರುವಂದನಾ ಸಮಿತಿಯ ಸಮನ್ವಯಕಾರ ಸುಬ್ರಮಣ್ಯ ನಟ್ಟೋಜ ಮಾತನಾಡಿ ಸಕಲ ಹಿಂದೂ ಸಮಾಜಕ್ಕೆ ಮಾರ್ಗದರ್ಶೀ ಪೀಠವೆನಿಸಿರುವ ಶೃಂಗೇರಿ ಜಗದ್ಗುರುಗಳನ್ನು ಸಕಲ ಗೌರವಾದರಗಳೊಂದಿಗೆ ಬರಮಾಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರು ಧರ್ಮ ಹಾಗೂ ದೇಶದ ಬಗೆಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಿರುವವರು. ಇಂತಹ ಗುರುಗಳನ್ನು ಹೊಂದಿರುವುದು ಹಿಂದೂ ಸಮಾಜದ ಪುಣ್ಯ ಎಂದು ಅಭಿಪ್ರಾಯಪಟ್ಟರು.

ಮನರಂಜನೆ, ಮಜಾ ಪಡೆಯುವ ಕಾರ್ಯಕ್ರಮಗಳಿಗೆ ಜನಜಂಗುಳಿ ಹರಿದುಬರುತ್ತಿದೆ. ಆದರೆ ಧರ್ಮವನ್ನು ಉಳಿಸುವ ಮತ್ತು ಬೆಳೆಸುವ ವಿಚಾರಗಳೆಡೆಗೂ ಅಷ್ಟೇ ಉತ್ಸಾಹದಿಂದ ನಮ್ಮ ಸಮಾಜ ಸ್ಪಂದಿಸಬೇಕು. ಜಾತಿಯ ಹಂಗುಗಳನ್ನು ಮೀರಿ ಸಮಾಜದ ಎಲ್ಲರೂ ಕಲೆತು, ಜಗದ್ಗುರುಗಳಿಗೆ ಅಭಿವಂದಿಸುವುದು ಅಗತ್ಯ. ಪ್ರತಿಯೊಬ್ಬರೂ ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳಲ್ಲಿ ಜಾಗೃತಿ ಮೂಡಿಸಿ ಕಾರ್ಯಕ್ರಮದ ಯಶಸ್ಸಿಗೆ ಕಾರಣೀಭೂತರಾಗಬೇಕು ಎಂದು ನುಡಿದರು.

ಗುರುವಂದನಾ ಸಮಿತಿಯ ಅಧ್ಯಕ್ಷ ಚಿದಾನಂದ ಬೈಲಾಡಿ ಮಾತನಾಡಿ ಎಲ್ಲರೂ ಒಂದಾಗಿ ಕಾರ್ಯತತ್ಪರರಾದಾಗ ಯಾವುದೇ ಕೆಲಸ ಕಷ್ಟಸಾಧ್ಯವೆನಿಸುವುದಿಲ್ಲ. ಸ್ಪಂದನೆ, ಸಮಯಪಾಲನೆ, ಶಿಸ್ತು ಮೊದಲಾದ ವಿಚಾರಗಳನ್ನು ಮೈಗೂಡಿಸಿಕೊಂಡು ಹಿರಿಯರ ಮಾರ್ಗದರ್ಶನದಲ್ಲಿ ಮುಂದುವರೆಯಬೇಕು ಎಂದು ಕರೆ ನೀಡಿದರು.

ವೇದಿಕೆಯಲ್ಲಿ ಗುರುವಂದನಾ ಸಮಿತಿಯ ಗೌರವಾಧ್ಯಕ್ಷ ಮುಗೆರೋಡಿ ಬಾಲಕೃಷ್ಣ ರೈ, ಕಾರ್ಯಾಧ್ಯಕ್ಷ ಶಿವರಾಮ ಆಳ್ವ, ಕೋಶಾಧಿಕಾರಿ ಕಾವು ಹೇಮನಾಥ ಶೆಟ್ಟಿ, ಸಂಚಾಲಕ ಡಾ.ಸುರೇಶ್ ಪುತ್ತೂರಾಯ, ಧರ್ಮಾಭ್ಯುದಯ – ಧರ್ಮ ಶಿಕ್ಷಣ ತಾಲೂಕು ಸಮಿತಿಯ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಬೋರ್ಕರ್ ಉಪಸ್ಥಿತರಿದ್ದರು. ಗುರುವಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ ಕಾರ್ಯಕ್ರಮ ನಡೆಸಿಕೊಟ್ಟರು.

ಶೃಂಗೇರಿ ಜಗದ್ಗುರುಗಳಿಗೆ ಭಾರತ ಮಾತೆಯ ಪುತ್ಥಳಿ:

ಧರ್ಮದ ಬಗೆಗೆ ಮಾತ್ರವಲ್ಲದೆ ದೇಶದ ಬಗೆಗೂ ನಿರಂತರವಾಗಿ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿರುವ ಶೃಂಗೇರಿ ಜಗದ್ಗುರುಗಳಿಗೆ ಇನ್ನಿತರ ಕಾಣಿಕೆಗಳೊಂದಿಗೆ ಭಾರತಮಾತೆಯ ಪುತ್ಥಳಿಯನ್ನೂ ಸಮರ್ಪಿಸುವ ಬಗೆಗೆ ಸಭೆಯಲ್ಲಿ ನಿರ್ಣಯಿಸಲಾಯಿತು. ಏ. 21ರಂದು ಬಪ್ಪಳಿಗೆಯ ಅಂಬಿಕಾ ಕ್ಯಾಂಪಸ್ ನಲ್ಲಿ ಮತ್ತೊಮ್ಮೆ ಸಭೆ ಸೇರಿ ಕಾರ್ಯಕ್ರಮದ ಬಗೆಗಿನ ಜವಾಬ್ದಾರಿ ಹಂಚಿಕೆ ನಡೆಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ತಮಿಳುನಾಡು ಚುನಾವಣೆ: ಬಿಜೆಪಿಯ ಅಭ್ಯರ್ಥಿಗಳ ಪೈಕಿ ಅಣ್ಣಾಮಲೈ ಹೆಸರಿಲ್ಲ!! ಪೋಸ್ಟ್ ಮಾಡಿ ತನ್ನ ಗುರಿ ತಿಳಿಸಿದ ಅಣ್ಣಾಮಲೈ!

ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಐಪಿಎಸ್ ಅಧಿಕಾರಿ ಕೆ. ಅಣ್ಣಾಮಲೈ ಅವರನ್ನು ಬಿಟ್ಟು…