ಪ್ರಚಲಿತ

ರಾಷ್ಟ್ರೀಯ ಯುವ ಸಮಾವೇಶಕ್ಕೆ ಶ್ರೀಕಾಂತ್ ಪೂಜಾರಿ ಬಿರಾವು ಆಯ್ಕೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕೆಐಐಟಿ ವಿಶ್ವವಿದ್ಯಾನಿಲಯ ಭುವನೇಶ್ವರ, ಆರ್ಟ್ ಆಫ್ ಗಿವಿಂಗ್ ಮತ್ತು ವಿಶ್ವ ಸಂಸ್ಥೆ ಸ್ವಯಂಸೇವಕ ವತಿಯಿಂದ ಒಡಿಸ್ಸಾದ ಭುವನೇಶ್ವರ್ ಕೆಐಐಟಿ ವಿಶ್ವವಿದ್ಯಾನಿಲಯದಲ್ಲಿ ಏಪ್ರಿಲ್ 18 ರಿಂದ 20 ರ ವರೆಗೆ ನಡೆಯುವ ರಾಷ್ಟ್ರೀಯ ಯುವ ಸಮಾವೇಶ 2026 ಕ್ಕೆ ಕರ್ನಾಟಕದಿಂದ ಶ್ರೀಕಾಂತ್ ಪೂಜಾರಿ ಬಿರಾವು ಭಾಗವಹಿಸಲಿದ್ದಾರೆ.

chennai-shopping
maithri

ದೇಶದ ವಿವಿಧ ರಾಜ್ಯಗಳಿಂದ ಯುವಜನರಿಗೆ ಸಂಬಂಧಿಸಿದಂತೆ ಕೆಲಸ ನಿರ್ವಹಿಸುತ್ತಿರುವ ಯುವಜನರನ್ನು ಈ ಸಮಾವೇಶಕ್ಕೆ ಅಹ್ವಾನ ನೀಡಿದ್ದು ಯುವಜನರ ಸಂಭಂದಿಸಿದ ಚರ್ಚೆಗಳು, ಗೋಷ್ಠಿಗಳು ನಡೆಯಲಿವೆ. ಶ್ರೀಕಾಂತ್ ಪೂಜಾರಿ ಬಿರಾವು ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಮ್, ಯುನಿಸೆಫ್, ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇದರ ವತಿಯಿಂದ ಈಗಾಗಲೇ ಶಾಲಾ ಕಾಲೇಜು, ಯುವಕ ಯುವತಿ ಮಂಡಲಗಳಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಕ್ಕಿಂತ ಅಧಿಕ ಯುವಜನರಿಗೆ 700 ಜೀವನ ಕೌಶಲ್ಯ, ವೃತ್ತಿ ಮಾರ್ಗದರ್ಶನ, ಉದ್ಯೋಗ ಸಿದ್ದತೆ, ಉದ್ಯಮಶೀಲತಾ ತರಬೇತಿ ಇನ್ನಿತರ ಕಾರ್ಯಕ್ರಮಗಳ ಮುಖಾಂತರ ತರಬೇತಿ ನೀಡಿದ್ದು ,ಆನೇಕ ಉದ್ಯೋಗ ಮೇಳವನ್ನು ಅಯೋಜಿಸಿ ಉದ್ಯೋಗಕ್ಕೆ ನೆರವಾಗಿದ್ದಾರೆ.2025 ನೇ ಸಾಲಿನಲ್ಲಿ ಭಾರತ ಸರಕಾರ‌ ಇವರ ಯುವಜನ ಸೇವೆಗೆ ದೆಹಲಿಯ ಕೆಂಪುಕೋಟೆಗೆ ಸ್ವಾತಂತ್ರ್ಯ ದಿನಾಚರಣೆಗೆ  ವಿಶೇಷ ಅತಿಥಿಯಾಗಿ ಅಹ್ವಾನಿಸಿ ಗೌರವಿಸಿದೆ.

ಕರ್ನಾಟಕ ಸರಕಾರದಿಂದ ಅತ್ಯುತ್ತಮ ಜೀವನ ಕೌಶಲ್ಯ ಸುಗಮಕಾರ ಪ್ರಶಸ್ತಿ ಮತ್ತು ರಾಜ್ಯ ಸ್ವಾಮಿ ವಿವೇಕಾನಂದ ಸದ್ಭಾವನ ಪ್ರಶಸ್ತಿ ಪುರಸ್ಕೃತರಾದ ಇವರ ಯುವಜನ ಸಂಬಂಧಿಸಿದ ಸೇವೆಯನ್ನು ಗುರುತಿಸಿ ಕರ್ನಾಟಕದಿಂದ ರಾಷ್ಟ್ರೀಯ ಯುವ ಸಮಾವೇಶ 2026 ಕ್ಕೆ ಆಯ್ಕೆ ಮಾಡಲಾಗಿದೆ ಎಂದು ರಾಷ್ಟ್ರೀಯ ಯುವ ಸಮಾವೇಶದ ಅಯೋಜಕರಾದ ಮಯಾಂಕ್ ಸಿಂಗ್ ನೇಗಿ ತಿಳಿಸಿದ್ದಾರೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts