ಪ್ರಚಲಿತ

ಅಕ್ಷಯ ಕಾಲೇಜಿನಲ್ಲಿ ಏವಿಯೇಷನ್ ವಿಭಾಗದ “AVIATION FUTURE GROUND AND AIR” ಕಾರ್ಯಾಗಾರ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣದ ಮೂಲಕ ಭವಿಷ್ಯ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರುವ ಪುತ್ತೂರು ಅಕ್ಷಯ ಕಾಲೇಜು ಏವಿಯೇಷನ್ ಶಿಕ್ಷಣವನ್ನು ಪರಿಚಯಿಸಿದ ಮೊದಲ ಕಾಲೇಜು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ವಿದ್ಯಾರ್ಥಿಗಳಿಗೆ ಉದ್ಯೋಗಮುಖಿ ತರಬೇತಿ ನೀಡುವಲ್ಲಿ ಈ ಸಂಸ್ಥೆ ಪ್ರಮುಖ ಪಾತ್ರವಹಿಸುತ್ತಿದೆ.

chennai-shopping
maithri

ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಏವಿಯೇಷನ್ ವಿಭಾಗದ ವತಿಯಿಂದ “AVIATION FUTURE GROUND AND AIR” ಎಂಬ ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರು ಬೇಸ್‌ನ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಸೀನಿಯರ್ ಏರ್-ಹೋಸ್ಟೆಸ್‌ಗಳಾದ ದೀಪ ಹಾಗೂ ಜಸ್ವಿಂದರ್ ಅವರು, ವಿದ್ಯಾರ್ಥಿಗಳಿಗೆ ಏವಿಯೇಷನ್ ಕ್ಷೇತ್ರದ ವಿಮಾನ ನಿಲ್ದಾಣ ವ್ಯವಸ್ಥೆ ಹಾಗೂ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಯಾನದಲ್ಲಿ ಇರುವ ವಿವಿಧ ಉದ್ಯೋಗಾವಕಾಶಗಳ ಕುರಿತು ಮಾಹಿತಿ ನೀಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಏವಿಯೇಷನ್ ಕ್ಷೇತ್ರದಲ್ಲಿ ತಮ್ಮ ಭವಿಷ್ಯವನ್ನು ಹೇಗೆ ರೂಪಿಸಿಕೊಳ್ಳಬಹುದು ಎಂಬುದರ ಬಗ್ಗೆ ಮಾರ್ಗದರ್ಶನ ನೀಡಿದರು.

ಏವಿಯೇಷನ್ ವಿಭಾಗ ಮುಖ್ಯಸ್ಥೆ ಜಯಶ್ರೀ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ., HR ಭರತ್, PRO ಯಾಮಿನಿ, ಉಪನ್ಯಾಸಕಿ ಆಶ್ರಿತಾ ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts