ಪ್ರಚಲಿತ

ಪುತ್ತೂರು: ಎಸ್.ಪಿ.ವೈ.ಎಸ್.ಎಸ್.ನಿಂದ ಮಕ್ಕಳಿಗಾಗಿ ವ್ಯಕ್ತಿತ್ವ ವಿಕಸನ ಉಚಿತ ಶಿಬಿರ | 8ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ 21 ದಿನಗಳ ತರಗತಿ

GL

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಪುತ್ತೂರು ನೇತ್ರಾವತಿ ವಲಯದ ನೇತೃತ್ವದಲ್ಲಿ 21 ದಿನಗಳ ಮಕ್ಕಳ ವ್ಯಕ್ತಿತ್ವ ವಿಕಸನ ಉಚಿತ ತರಗತಿಗಳು ತಾಲೂಕಿನ ವಿವಿಧೆಡೆ ನಡೆಯಲಿದೆ.

chennai-shopping
maithri

8ರಿಂದ 16 ವರ್ಷದೊಳಗಿನ ಮಕ್ಕಳು ಈ ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರದಲ್ಲಿ ಯೋಗ, ಧ್ಯಾನ, ಮಂತ್ರ ಮತ್ತು ಶ್ಲೋಕ ಪಠಣ, ಸಂಸ್ಕಾರ ಹಾಗೂ ಮೌಲ್ಯಯುತ ಕಥೆಗಳು, ಚಿತ್ರ ಮತ್ತು ಕರಕುಶಲ ಕಲೆ, ದೇಹಕ್ಕೆ ಶಕ್ತಿ ತುಂಬುವ ಚಟುವಟಿಕೆಗಳು, ದೇಸೀ ಆಟಗಳು, ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ಮೊದಲಾದವು ಇರಲಿವೆ.

spyss

ಏ. 5ರಿಂದ ಕಂಬಳಬೆಟ್ಟು ಶ್ರೀ ಜಯದುರ್ಗ ಪರಮೇಶ್ವರಿ ಶಾಖೆ (), ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶಾಖೆ, ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಶಾಖೆ, ನರಿಮೊಗರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನ ಶಾಖೆ, ಪೋಳ್ಯ ಶ್ರೀ ಲಕ್ಷ್ಮೀ ವೆಂಕಟರಮಣ ಮಠ ಶಾಖೆ, ಪಾಂಗಳಾಯಿ ಶ್ರೀ ಅರಸು ಮುಂಡ್ಯತ್ತಾಯ ಶಾಖೆ, ಏ. 11ರಿಂದ ಸಾಜ ಶ್ರೀ ದುರ್ಗಾ ವೆಂಕಟರಮಣ ಭಜನಾ ಮಂದಿರ ಶಾಖೆ, ಏ. 22ರಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶಾಖೆಯಲ್ಲಿ ಶಿಬಿರ ನಡೆಯಲಿದೆ. ಕಲ್ಲೇಗ ಭಾರತ್ ಮಾತಾ ಶಾಖೆಯಲ್ಲಿ ಇನ್ನಷ್ಟೇ ದಿನ ನಿಗದಿಯಾಗಬೇಕಿದೆ.

ಕಬಕ ಶ್ರೀ ಮಹಾದೇವಿ ಕಲಾಮಂದಿರ ಶಾಖೆಯಲ್ಲಿ ಮಾರ್ಚ್ 30ರಿಂದ ಶಿಬಿರ ಆರಂಭಗೊಂಡಿದೆ. ಮಾಹಿತಿಗೆ 94496 39889, 70908 38827 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts