ಪ್ರಚಲಿತ

ಜಾಗತಿಕ ಮಟ್ಟದ ಪ್ರಿಸ್ಕೂಲ್ ಯೂರೋಕಿಡ್ಸ್ ಮಾ. 21ರಂದು ಪುತ್ತೂರಿನಲ್ಲಿ ಉದ್ಘಾಟನೆ

GL

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಜಾಗತಿಕ ಮಟ್ಟದಲ್ಲಿ ಹೆಸರುಗಳಿಸಿರುವ 3 ದೇಶಗಳಲ್ಲಿ 1700ಕ್ಕೂ ಅಧಿಕ ಕೇಂದ್ರಗಳನ್ನು ಹೊಂದಿರುವ ಯೂರೋಕಿಡ್ಸ್ ಇದೀಗ ಪುತ್ತೂರಿಗೆ ಕಾಲಿಟ್ಟಿದೆ.

chennai-shopping
maithri

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಕ್ಕಾಜೆ ಟ್ರಸ್ಟ್ ಟ್ರಸ್ಟಿ ಮಂಜು ಗೋಪಿನಾಥ್, ದರ್ಬೆ ವಿಶಾಲ್ ಮೆಗಾ ಮಾರ್ಟ್ ಮುಂಭಾಗದಲ್ಲಿ ಯೂರೋಕಿಡ್ಸ್ ಪ್ರಿಸ್ಕೂಲ್ ಕ್ಯಾಂಪಸ್ ನಲ್ಲಿ ಮಾ. 21ರಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ಕೃಷಿಕ ಸುದಾಮ ಕಕ್ಕಾಜೆ ದೀಪೋಜ್ವಲನೆ ಮಾಡಲಿದ್ದಾರೆ. ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ತರಗತಿ ಕೊಠಡಿಗಳನ್ನು ಉದ್ಘಾಟಿಸಲಿದ್ದಾರೆ. ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಕಜೆ ಲಾ ಛೇಂಬರಿನ ಮಹೇಶ್ ಕಜೆ, ಸಚಿನ್ ಟ್ರೇಡಿಂಗ್ ಮಾಲಕ ಮಂಜುನಾಥ್ ನಾಯಕ್, ಫಾರೂಕ್ ಬಾಯಬೆ ಮುಖ್ಯಅತಿಥಿಗಳಾಗಿರುವರು ಎಂದರು.

ರಂಜಿತಾ ಶೆಟ್ಟಿ ಕಾವು ಮಾತನಾಡಿ, ಪ್ರತಿ ಮಗುವಿನ ಹೆಜ್ಜೆ ಆತ್ಮವಿಶ್ವಾಸದಿಂದ ಆರಂಭವಾಗಬೇಕು. ಆ ಕನಸನ್ನು ಸಾಕಾರಗೊಳಿಸಲು ಭಾರತದ ಪ್ರಮುಖ ಆರಂಭಿಕ ಶಿಕ್ಷಣ ಸಂಸ್ಥೆ ಯೂರೋಕಿಡ್ಸ್ ಇದೀಗ ಪುತ್ತೂರಿನ ದರ್ಬೆಯಲ್ಲಿ ಆರಂಭಗೊಳ್ಳುತ್ತಿದೆ. ಇಲ್ಲಿ ಮಕ್ಕಳು ಕೇವಲ ಅಕ್ಷರಗಳನ್ನು ಕಲಿಯುವುದಲ್ಲ. ಬದಲಾಗಿ ಯೋಚಿಸುವುದು, ಅನ್ವೇಷಿಸುವುದು ಮತ್ತು ಆತ್ಮವಿಶ್ವಾಸದಿಂದ ತಮ್ಮನ್ನು ವ್ಯಕ್ತಪಡಿಸುವುದನ್ನು ಕಲಿಯುತ್ತಾರೆ ಎಂದರು.

ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಜೆಕ್ಟ್ ಝೀರೊ ಆಧಾರಿತ ಈ ವಿಧಾನ ಮಕ್ಕಳಲ್ಲಿ ಆಳವಾದ ಚಿಂತನೆಗೆ ದಾರಿ ಮಾಡಿಕೊಡುತ್ತದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಸುರಕ್ಷಿತ ತರಗತಿಗಳು, ವಿಷಕಾರಿಯಲ್ಲದ ಸಾಮಗ್ರಿಗಳು, ತರಬೇತಿ ಪಡೆದ ಶಿಕ್ಷಕರು ಮತ್ತು ಸಿಬ್ಬಂದಿ, ಕಟ್ಟುನಿಟ್ಟಿನ ಭದ್ರತಾ ಕ್ರಮಗಳಲ್ಲಿ ಪ್ರತಿ ಮಗು ಸುರಕ್ಷಿತವಾಗಿಯೂ ಸಂತೋಷವಾಗಿಯೂ ಕಲಿಯುತ್ತದೆ. ಒಟ್ಟಿನಲ್ಲಿ ಬೌದ್ಧಿಕ, ಸಾಮಾಜಿಕ, ಭಾವನಾತ್ಮಕ ಬೆಳವಣಿಗೆಗೆ ಸಮಾನ ಪ್ರಾಮುಖ್ಯತೆಯನ್ನು ಇಲ್ಲಿ ನೀಡಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಯರಾಮ್ ಕಕ್ಕಾಜೆ, ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಕೆ. ನಾರಾಯಣ್ ಕೆ. ಉಪಸ್ಥಿತರಿದ್ದರು.


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಫೆ. 11ಕ್ಕೆ ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದಿಂದ ಮಂಗಳೂರು ಪುರಭವನದಲ್ಲಿ ರಾಜ್ಯ ಸಮಾವೇಶ

ಪುತ್ತೂರು: ಕರ್ನಾಟಕ ರಾಜ್ಯ ಕನ್ನಡ ಉಳಿಸಿ, ಬೆಳೆಸಿ ಅಭಿಯಾನ ಇದರ ವತಿಯಿಂದ ಕನ್ನಡ ಮನಸ್ಸುಗಳ…