ಪ್ರಚಲಿತ

ವಿದ್ಯಾರ್ಥಿನಿ ದೀಪಾಳ ಮನೆಗೆ ಸೋಲಾರ್ ದೀಪ, ಶೌಚಾಲಯದ ಕೊಡುಗೆ | ಯತೀಶ್ ದೇವ ನೇತೃತ್ವದಲ್ಲಿ ಆರ್ಯಾಪು ಗ್ರಾಪಂ ಸದಸ್ಯರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ಕ್ಯಾಂಡಲ್ ಬೆಳಕಿನಲ್ಲಿ ದಿನ ಕಳೆಯುತ್ತಿದ್ದ ಆರ್ಯಾಪು ಗ್ರಾಮದ ಕಾಯರಾಪು ನಿವಾಸಿ ಕೇಶವ ಅವರ ಮನೆಗೆ ಆರ್ಯಾಪು ಗ್ರಾಪಂನ ವಾರ್ಡ್ ಸದಸ್ಯರು ಮನೆ ಸೋಲಾರ್ ದೀಪ ಹಾಗೂ ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಗ್ರಾಪಂ ಅಧ್ಯಕ್ಷೆ ಗೀತಾ ಅವರು ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್ ನಾಯಕ್ ಬಳಕ್ಕ, ಯತೀಶ್ ದೇವ, ಪವಿತ್ರ ರೈ ತೊಟ್ಲಾ, ಕಸ್ತೂರಿ ಕೂರೇಲು, ಪಂಚಾಯತ್ ಕಾರ್ಯದರ್ಶಿ ಮೋನಪ್ಪ, ಸಹಾಯಕರಾದ ಹೊನ್ನಪ್ಪ ಹಾಗೂ ದೀಪಾ ಮತ್ತು ಮನೆಯ ಇತರ ಸದಸ್ಯರು ಉಪಸ್ಥಿತರಿದ್ದರು.

aryapu

ಕೇಶವ ಅವರದ್ದು ಬಡಕುಟುಂಬ. ಕೇಶವ ಅವರ ಮಗಳು ದೀಪಾ. ಹಂಟ್ಯಾರು ಶಾಲಾ ವಿದ್ಯಾರ್ಥಿನಿ. ಮನೆಯ ಸೂರು ಸೋರುತ್ತಿದೆ ಎಂದು ಶಾಸಕರಲ್ಲಿ ಕೇಳಿಕೊಂಡಾಗ, ಸಿಮೆಂಟ್ ಶೀಟ್ ಕೊಟ್ಟರು. ಇನ್ನು ಮೂಲಸೌಕರ್ಯಗಳಾದ ಶೌಚಾಲಯ, ಬೆಳಕಿನ ವ್ಯವಸ್ಥೆ ಇರಲಿಲ್ಲ. ರಾತ್ರಿ ಹೊತ್ತು ಕ್ಯಾಂಡಲಷ್ಟೇ ಬೆಳಕಿನ ಸ್ವತ್ತಾಗಿತ್ತು. ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿತ್ತು.

ಈ ಮನೆಗೆ ಶೌಚಾಲಯ ಹಾಗೂ ಬೆಳಕಿಗೆ ಸೋಲಾರ್ ದೀಪದ ವ್ಯವಸ್ಥೆ ಮಾಡಬೇಕೆಂದು ಆರ್ಯಾಪು ಗ್ರಾಪಂ ಸದಸ್ಯರಾದ ಯತೀಶ್ ದೇವ ನೇತೃತ್ವದ ತಂಡ ಮುಂದಾಯಿತು. ಶೌಚಾಲಯ ನಿರ್ಮಿಸಲು ಗ್ರಾಪಂನ ವಿಶೇಷ ಅನುದಾನ 9 ಸಾವಿರ ರೂ.ವನ್ನು ಬಳಸಿಕೊಂಡರು. ಇನ್ನುಳಿದಂತೆ ಯತೀಶ್ ದೇವ, ಹರೀಶ್ ನಾಯಕ್ ಬಳಕ್ಕ, ಪವಿತ್ರ ರೈ ತೊಟ್ಲಾ, ಕಸ್ತೂರಿ ಕೂರೇಲು ಹಾಗೂ 2ನೇ ವಾರ್ಡಿನ ಸದಸ್ಯರಾದ ಸುಬ್ರಮಣ್ಯ ಬಲ್ಯಾಯ ಅವರು ತಮಗೆ ಗ್ರಾಮ ಪಂಚಾಯಿತಿನಿಂದ ಸಿಗುವ ಗೌರವ ಧನವನ್ನು ಕೊಡುಗೆಯಾಗಿ ನೀಡಿದರು. ಹೀಗೆ ಒಟ್ಟಾದ ಸುಮಾರು 25 ಸಾವಿರ ರೂ.ನಿಂದ ಬಡಕುಟುಂಬಕ್ಕೆ ಶೌಚಾಲಯವನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಇನ್ನು ಸೋಲಾರ್ ದೀಪಕ್ಕೆ ಗ್ರಾಪಂನ ವಾರ್ಡ್ ಅನುದಾನವನ್ನು ಬಳಸಿಕೊಳ್ಳಲಾಯಿತು.

ನಮ್ಮೂರಿನ ಅಳಿಯಂದಿರಿಂದ ಸಾಮಾಜಿಕ ಕಾರ್ಯ:

ಶಾಸಕ ಅಶೋಕ್ ಕುಮಾರ್ ರೈ ಅವರು ಸಂಟ್ಯಾರಿಗೆ ಆಗಮಿಸಿದಾಗ, ದೀಪಾಳ ಮೂಲಕ ಶಾಸಕರ ಗಮನ ಸೆಳೆದದ್ದು ಯತೀಶ್ ದೇವ ಅವರು. ಜನಸೇವೆಗಾಗಿ ಆಯ್ಕೆಯಾಗಿದ್ದು, ನಿಜಾರ್ಥದ ಜನಸೇವೆ ಮಾಡುತ್ತಿದ್ದಾರೆ. ಪಂಚಾಯಿತಿನಿಂದ ಸಿಗುವ ಸವಲತ್ತುಗಳನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದ್ದಾರೆ. ಇಂತಹ ಹಲವಾರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಯತೀಶ್ ದೇವ ಹಾಗೂ ಹರೀಶ್ ನಾಯಕ್ ಬಳಕ್ಕ ಅವರು ನಮ್ಮೂರಿನ ಅಳಿಯಂದಿರು. ಆದರೆ ಮನೆ ಮಗನ ರೀತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷಾತೀತವಾಗಿ, ನಿಷ್ಠೆಯಿಂದ, ಮಾನವೀಯತೆ ನೆಲೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇಶವ ಅವರ ಮನೆಯಲ್ಲಿ ಶೌಚಾಲಯ ಇಲ್ಲದಿರುವುದನ್ನು ಗಮನಿಸಿ, ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ತಮ್ಮ ಭರವಸೆಯನ್ನು ಈಡೇರಿಸಿದ್ದಾರೆ. ಮನೆಗೆ ಸೋಲಾರ್ ಲೈಟ್ ನೀಡಿ, ಬೆಳಕನ್ನು ನೀಡಿದ್ದಾರೆ. ಸದಾ ಒಂದಿಲ್ಲೊಂದು ಜನಮುಖಿ ಕಾರ್ಯಗಳಲ್ಲಿ ಗುರುತಿಸಿಕೊಳ್ಳುತ್ತಿರುವ ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯರ ಉತ್ತಮ ಕಾರ್ಯಕ್ಕೆ ಇದೊಂದು ತಾಜಾ ಉದಾಹರಣೆ.

– ಬಾಬು ಮರಿಕೆ, ತಾಲೂಕು ಅಧ್ಯಕ್ಷರು, ಆದಿದ್ರಾವಿಡ ಸಮಾಜ ಸೇವಾ ಸಂಘ, ಪುತ್ತೂರು


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಫೆ. 11ಕ್ಕೆ ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದಿಂದ ಮಂಗಳೂರು ಪುರಭವನದಲ್ಲಿ ರಾಜ್ಯ ಸಮಾವೇಶ

ಪುತ್ತೂರು: ಕರ್ನಾಟಕ ರಾಜ್ಯ ಕನ್ನಡ ಉಳಿಸಿ, ಬೆಳೆಸಿ ಅಭಿಯಾನ ಇದರ ವತಿಯಿಂದ ಕನ್ನಡ ಮನಸ್ಸುಗಳ…

ಚಾಮುಂಡಿ ಬೆಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಹರಸಾಹಸ! 100 ಎಕರೆಯಷ್ಟು ಅರಣ್ಯ ಪ್ರದೇಶ ಬೆಂಕಿಗಾಹುತಿ!

ಕಿಡಿಗೇಡಿಗಳ ಕೃತ್ಯದಿಂದ ಚಾಮುಂಡಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡು…