ಪ್ರಚಲಿತಶಿಕ್ಷಣ

ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ | ಅಧ್ಯಕ್ಷೆ: ಜಸ್ಮಿ ಡಿ.ಎಸ್., ಉಪಾಧ್ಯಕ್ಷ: ಶ್ರೀಕೃಷ್ಣ ನಟ್ಟೋಜ, ಕಾರ್ಯದರ್ಶಿ: ಸನ್ನಿಧಿ ಎನ್.

ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ ಶುಕ್ರವಾರ ನಡೆಯಿತು.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ 2025-26ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿ ಸಂಘದ ಚುನಾವಣೆ ಶುಕ್ರವಾರ ನಡೆಯಿತು.
ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಜಶ್ಮಿ ಡಿ ಎಸ್, ಉಪಾಧ್ಯಕ್ಷರಾಗಿ ಶ್ರೀಕೃಷ್ಣ ಎಸ್ ನಟ್ಟೋಜ, ಕಾರ್ಯದರ್ಶಿಯಾಗಿ ಸನ್ನಿಧಿ ಎನ್, ಜತೆ ಕಾರ್ಯದರ್ಶಿಯಾಗಿ ಅಮೂಲ್ಯ, ಸಾಂಸ್ಕೃತಿಕ ಮಂತ್ರಿಯಾಗಿ ಚಿನ್ಮಯಿ ಕಂಬಾರ್ ಹಾಗೂ ಉಪಮಂತ್ರಿಯಾಗಿ ಪಿ ಅಪೇಕ್ಷಾ ಪೈ, ಆರೋಗ್ಯ ಹಾಗೂ ಸ್ವಚ್ಛತಾ ಮಂತ್ರಿಯಾಗಿ ಸಿಂಚನ ಎಂ ಹಾಗೂ ಉಪಮಂತ್ರಿಯಾಗಿ ಶ್ರೇಯಸ್ ಎನ್, ಶಿಸ್ತು ಮಂತ್ರಿಯಾಗಿ ರಿತೀಶ್ ಬಿ ಹಾಗೂ ಉಪಮಂತ್ರಿಯಾಗಿ ಪೂಜಿತಾ ಎಸ್, ಶಿಕ್ಷಣ ಮಂತ್ರಿಯಾಗಿ ಇಶಿತಾ ಸೂರಜ್ ನಾಯರ್ ಮತ್ತು ಉಪಮಂತ್ರಿಯಾಗಿ ಜಸಿತ್ ಸಿ ಎಸ್, ಕ್ರೀಡಾ ಮಂತ್ರಿಯಾಗಿ ವಿಶ್ರುತ್ ರೈ ಮತ್ತು ಉಪಮಂತ್ರಿಯಾಗಿ ಸುಹಾನ್ ಆರ್ ರೈ ಆಯ್ಕೆಯಾಗಿರುತ್ತಾರೆ.
ಅಂಬಿಕಾ ಸಮೂಹ ಶಿಕ್ಷಣ ಸಂಸ್ತೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಉಪಸ್ಥಿತರಿದ್ದರು.
ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಚುನಾವಣಾಧಿಕಾರಿಗಳಾಗಿ ವಿಷ್ಣು ಪ್ರದೀಪ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸಚಿನ್, ಗಣಕಶಾಸ್ತ್ರ ಉಪನ್ಯಾಸಕಿ ಜಯಂತಿ ಹೊನ್ನಮ್ಮ, ಹಾಗೂ ಇತರ ಉಪನ್ಯಾಸಕ ಉಪನ್ಯಾಸಕೇತರ ವೃಂದ ಚುನಾವಣೆ ನಡೆಸಿದರು.

akshaya college

ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಅನಧಿಕೃತ ಶಾಲೆಗಳ ಸಂಖ್ಯೆ ಬಹಿರಂಗಪಡಿಸಿದ ಸರ್ಕಾರ: ಕಠಿಣ ಕ್ರಮದ ಸೂಚನೆ | ದ.ಕ., ಉಡುಪಿಯಲ್ಲೂ ಇದೆ ಅಕ್ರಮ ಶಾಲೆಗಳು!!

ಬೆಂಗಳೂರು: ರಾಜ್ಯದಲ್ಲಿ ಅನಧಿಕೃತ ಶಾಲೆಗಳ ಸಂಖ್ಯೆಯನ್ನು‌ ಸರಕಾರ ಬಹಿರಂಗಪಡಿ ಸಿದ್ದು, ಶಾಲಾ…

ಜುಲೈ 12ರಂದು ರಾಷ್ಟ್ರೀಯ ಲೋಕ ಅದಾಲತ್ | ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಪುತ್ತೂರಿನ ನ್ಯಾಯಾಧೀಶರು

ಪುತ್ತೂರು: ರಾಜೀ ಸಂದಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು…