ಪ್ರಚಲಿತ

ಹೋಟೆಲ್ ಪಾರ್ಕಿಂಗ್’ಗೆ ಪೊಲೀಸ್ ಬ್ಯಾರಿಕೇಡ್!

ಪುತ್ತೂರು: ತಾಲೂಕಿನ ಕೇಂದ್ರ ಸ್ಥಾನದಂತಿರುವ ಪುತ್ತೂರು ಕೆ.ಎಸ್.ಆರ್.ಟಿ‌.ಸಿ. ಬಸ್ ನಿಲ್ದಾಣದ ಬಳಿಯಲ್ಲೇ ಇರುವ ಹೋಟೆಲ್ ಪಾರ್ಕಿಂಗಿಗೆ ಪೊಲೀಸ್ ಬ್ಯಾರಿಕೇಡ್ ಇಟ್ಟಿರುವುದು ಇದೀಗ ಚರ್ಚಾಸ್ಪದವಾಗಿದೆ.

ಈ ಸುದ್ದಿಯನ್ನು ಶೇರ್ ಮಾಡಿ

ಪುತ್ತೂರು: ತಾಲೂಕಿನ ಕೇಂದ್ರ ಸ್ಥಾನದಂತಿರುವ ಪುತ್ತೂರು ಕೆ.ಎಸ್.ಆರ್.ಟಿ‌.ಸಿ. ಬಸ್ ನಿಲ್ದಾಣದ ಬಳಿಯಲ್ಲೇ ಇರುವ ಹೋಟೆಲ್ ಪಾರ್ಕಿಂಗಿಗೆ ಪೊಲೀಸ್ ಬ್ಯಾರಿಕೇಡ್ ಇಟ್ಟಿರುವುದು ಇದೀಗ ಚರ್ಚಾಸ್ಪದವಾಗಿದೆ.

akshaya college

ಸಾಮಾನ್ಯವಾಗಿ ಪೊಲೀಸ್ ಬ್ಯಾರಿಕೇಡ್ ಬಳಕೆ ಆಗಬೇಕಾಗಿರುವುದು ಎಲ್ಲಿ? ಸಾರ್ವಜನಿಕ ಸ್ಥಳದಲ್ಲಿ ಮತ್ತು ಸಾರ್ವಜನಿಕ ಬಳಕೆಗಾಗಿ. ಆದರೆ ಇಲ್ಲಿ ಖಾಸಗಿ ಸಂಸ್ಥೆಯೊಂದರ ಪಾರ್ಕಿಂಗ್’ಗೆ ಬ್ಯಾರಿಕೇಡ್ ಬಳಸಿರುವುದು ಎಷ್ಟು ಸರಿ?

ಪೊಲೀಸ್ ಇಲಾಖೆಯೇ ಈ ಬ್ಯಾರಿಕೇಡ್ ಇಟ್ಟಿದೆಯೋ ಅಥವಾ ಪೊಲೀಸ್ ಇಲಾಖೆಯ ಗಮನಕ್ಕೆ ಬಾರದೇ ಈ ಬ್ಯಾರಿಕೇಡ್ ಇಡಲಾಗಿದೆಯೋ ಗೊತ್ತಿಲ್ಲ. ಒಟ್ಟಿನಲ್ಲಿ ಸಾರ್ವಜನಿಕ ಸ್ವತ್ತಿನ ದುರುಪಯೋಗ ಆಗುತ್ತಿದೆ ಎನ್ನುವುದು ಮಾತ್ರ ನಿಜ.

ನಗರಸಭೆ, ಪೊಲೀಸ್, ಕೆ.ಎಸ್.ಆರ್.ಟಿ.ಸಿ. ನಿರ್ಲಕ್ಷ್ಯ:

ಕೆ.ಎಸ್.ಆರ್.ಟಿ.ಸಿ. ಮತ್ತು ಪಕ್ಕದ ಹೋಟೆಲ್ ಮುಂಭಾಗ ಬ್ಯಾರಿಕೇಡ್ ಇಟ್ಟಿರುವುದೇ ತಪ್ಪು. ಪ್ರಯಾಣಿಕ ವಾಹನ ರಸ್ತೆಯಲ್ಲಿ ನಿಲ್ಲಬೇಕೆ? ಕೋರ್ಟ್ ಆದೇಶದ ಪ್ರಕಾರ, ವಾಣಿಜ್ಯ ಸಂಕೀರ್ಣದ ಮುಂಭಾಗ ಬ್ಯಾರಿಕೇಡ್ ಇಟ್ಟೋ ಅಥವಾ ಇನ್ನಾವುದೋ ವಸ್ತುಗಳ ಮೂಲಕ ಪಾರ್ಕಿಂಗ್ ನಿಷೇಧಿಸುವಂತೆಯೇ ಇಲ್ಲ. ಇದರ ಬಗ್ಗೆ ನಗರಸಭೆ, ಪೊಲೀಸ್ ಹಾಗೂ ಕೆ.ಎಸ್.ಆರ್.ಟಿ.ಸಿ.ಗೆ ಮನವಿ ನೀಡಿದರೂ, ಪ್ರಯೋಜನ ಶೂನ್ಯ.

ಉಲ್ಲಾಸ್ ಪೈ, ಕೋಶಾಧಿಕಾರಿ, ಪುತ್ತೂರು ವರ್ತಕ ಸಂಘ ಹಾಗೂ ನಿಯೋಜಿತ ಅಧ್ಯಕ್ಷರು, ರೋಟರಿ ಕ್ಲಬ್ ಪುತ್ತೂರು ಸಿಟಿ


ಈ ಸುದ್ದಿಯನ್ನು ಶೇರ್ ಮಾಡಿ
Astrologer

What's your reaction?

Related Posts

ಕಾಲೇಜು ವಿದ್ಯಾರ್ಥಿಗಳಿಗೆ 6 ವಿಶೇಷ AI ಸಾಧನ ಉಡುಗೊರೆ ನೀಡಿದ ಗೂಗಲ್ | ಐದು ದೇಶದ ವಿದ್ಯಾರ್ಥಿಗಳಿಗೆ ಉಚಿತ ಚಂದಾ ಆಫರ್!!

ಗೂಗಲ್ ಫಾರ್ ಎಜುಕೇಷನ್ ಎಂಬ ಧ್ಯೇಯದಡಿ ಗೂಗಲ್ ಕಾಲೇಜು ವಿದ್ಯಾರ್ಥಿಗಳಿಗೆ 6 ಹೊಸ ಪರಿಕರಗಳನ್ನು…